2ನೇ ಮದುವೆಗೆ ಒಪ್ಪದ ಪತ್ನಿಗೆ ವಿಷ ಕುಡಿಸಿ ಕೊಂದ ಪೊಲೀಸ್ ಪತಿ..?

Police--01

ರಾಯಚೂರು, ಜು.18- ಎರಡನೆ ಮದುವೆಗೆ ಒಪ್ಪಿಗೆ ನೀಡದ ಪತ್ನಿಗೆ ಪೊಲೀಸ್ ಕಾನ್ಸ್ಟೆಬಲ್  ಒಬ್ಬ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೇದೆ ಮಹೇಂದ್ರ ಎನ್ನುವವನು ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮಹೇಂದ್ರ ಎರಡನೆ ಮದುವೆ ಮಾಡಿಕೊಳ್ಳುವ ಚಿಂತನೆ ನಡೆಸಿದ್ದ. ಆದರೆ ಪತ್ನಿ ಇದಕ್ಕೆ ಒಪ್ಪಿಗೆ ನೀಡರಲಿಲ್ಲ.

ಇದರಿಂದ ಕೆರಳಿದ ಪೇದೆ ಮಹೇಂದ್ರ ನಿನ್ನೆ ರಾತ್ರಿ ತನ್ನ ಹೆಂಡತಿಗೆ ವಿಷ ಕುಡಿಸಿದ್ದಾನೆ. ತಕ್ಷಣ ಆಕೆಯನ್ನು ರಾಯಚೂರಿನ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮುಂಜಾನೆ ಕೊನೆಯುಸಿರೆಳೆದಿದ್ದಾಳೆ ಎಂದು ಆಕೆಯ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಾದಗಿರಿ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಪೇದೆ ಮಹೇಂದ್ರ ನಾಪತ್ತೆಯಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin