5.25 ಕೋಟಿ ರೂ. ಚಿನ್ನಾಭರಣ ದರೋಡೆ ಮಾಡಿದ್ದ ಗ್ಯಾಂಗ್ 48 ಗಂಟೆಗಳಲ್ಲೇ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Dubai-Police--01

ದುಬೈ, ಜು.18-ಹಾಡಹಗಲೇ 30 ಲಕ್ಷ ದಿರ್‍ಹಂ (ಸುಮಾರು ಐದು ಕಾಲು ಕೋಟಿ ರೂ.ಗಳು) ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದ ದರೋಡೆಕೋರರ ತಂಡವೊಂದನ್ನು ದುಬೈ ಪೊಲೀಸರು ಕೃತ್ಯ ನಡೆದ 48 ಗಂಟೆಗಳ ಒಳಗಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದುಬೈನ್ ನ್ಯಾಷನಲ್ ಸಿಟಿಯಲ್ಲಿರುವ ಕೇರಳದ ಉದ್ಯಮಿಯ ಚೆಟ್ಟಿಲಪಿಳ್ಳಿ ಜ್ಯುವೆಲರ್ಸ್‍ನಲ್ಲಿ ಈ ದರೋಡೆ ನಡೆದಿತ್ತು. ಐವರು ಮುಖವಾಡಧಾರಿಗಳು ಮಾರಕಾಸ್ತ್ರಗಳೊಂದಿಗೆ ಬೆಳಗ್ಗೆ 10 ಗಂಟೆಯಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ ನೌಕರರನ್ನು ಬೆದರಿಸಿ. ಪೆಪ್ಪರ್ ಸ್ಪ್ರೇ (ಮೆಣಸಿನ ಪುಡಿ) ಪ್ರಯೋಗಿಸಿ ಶೌಚಾಲಯದಲ್ಲಿ ಕೂಡಿ ಹಾಕಿ ಭಾರೀ ಮೊತ್ತದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು.

ಜ್ಯುವೆಲರಿಯಲ್ಲಿನ ಆಭರಣ ಪೆಟ್ಟಿಗೆಗಳು ಮತ್ತು ಅಲ್ಲಿದ್ದ ಒಡವೆಗಳ ವಿವರಗಳು ಅವರಿಗೆ ಚೆನ್ನಾಗಿ ತಿಳಿದಿತ್ತು ಎಂಬುದು ಈ ಗ್ಯಾಂಗ್ ದರೋಡೆ ಮಾಡಿದ ರೀತಿಯಿಂದಲೇ ತಿಳಿಯುತ್ತಿತ್ತು. ಚಿನ್ನಾಭರಣಗಳನ್ನು ಲೂಟಿ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.  ಈ ಕೃತ್ಯದ ಬಗ್ಗೆ ವಿವರಗಳನ್ನು ಕಲೆ ಹಾಕಿ ಕಾರ್ಯಪ್ರವೃತ್ತರಾದ ಪೊಲೀಸರು 48 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿದರು ಎಂದು ದುಬೈ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ಲಾ ಮರಿ ತಿಳಿಸಿದ್ದಾರೆ.   ಅಲ್‍ಐನ್ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಹಾಗೂ ವೈಸ್‍ನಲ್ಲಿ ಅಡಗಿದ್ದ ಇಬ್ಬರನ್ನು ಸೆರೆಹಿಡಿಯಲಾಗಿದೆ ಎಂದು ಅಪರಾಧ ತನಿಖಾ ವಿಭಾಗದ ಉಪ ಮುಖ್ಯಸ್ಥ ಮೇಜರ್ ಜನರಲ್ ಖಲೀಲ್ ಇಬ್ರಾಹಿಂ ಅಲ್ಲಾ ಮನ್ಸೂರಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin