ಅಮರನಾಥ ಯಾತ್ರಿಕರ ಸಾವಿನ ಸಂಖ್ಯೆ 48ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Amarnath-yatra--01

ಶ್ರೀನಗರ, ಜು.19-ಅಮರನಾಥ ದೇವಾಲಯದಿಂದ ಹಿಂದಿರುಗುತ್ತಿದ್ದ ಮಧ್ಯಪ್ರದೇಶದ 60 ವರ್ಷದ ಭಕ್ತರೊಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗೆ ಸಾವಿಗೀಡಾದ ಯಾತ್ರಿಕರ ಸಂಖ್ಯೆ 48ಕ್ಕೇರಿದೆ. ಕಾಶ್ಮೀರದ ಪ್ರಸಿದ್ಧ ಗುಹಾಂತರ ದೇವಾಲಯದಲ್ಲಿ ಶಿವಲಿಂಗ ದರ್ಶನ ಪಡೆದು ಯಾತ್ರಿಕರ ತಂಡದೊಂದಿಗೆ ಪಹಲ್‍ಗಾಮ್‍ನಲ್ಲಿನ ನುವಾನ್ ಮೂಲ ಶಿಬಿರಕ್ಕೆ ಹಿಂದಿರುಗುತ್ತಿದ್ದ ರಾಮೇಶ್ವರ್ ಪಟಿದರ್ ಪಿಸ್ಸು ಟಾಪ್ ಪರ್ವತದಲ್ಲಿ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಟಿದರ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸ್ವಾಭಾವಿಕ ಕಾರಣಗಳಿಂದಾಗಿ ಈವರೆಗೆ 20 ಮಂದಿ ಅಸುನೀಗಿದ್ದಾರೆ. ಉಗ್ರರು ಜುಲೈ 10ರಂದು ನಡೆಸಿದ ದಾಳಿಯನ್ನು 8 ಯಾತ್ರಾರ್ಥಿಗಳು ಹತರಾಗಿದ್ದರು. ವಿವಿಧ ರಸ್ತೆ ಅಪಘಾತಗಳಲ್ಲಿ ಇತರ 20 ಮಂದಿ ಮೃತಪಟ್ಟಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin