ಉಕ್ರೇನ್ ಉಗ್ರರಿಂದ ಹೊಸ ರಾಷ್ಟ್ರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Ukraine

ಮಾಸ್ಕೋ, ಜು.19-ಪೂರ್ವ ಉಕ್ರೇನ್‍ನಲ್ಲಿರುವ ಪ್ರತ್ಯೇಕತಾವಾದಿ ಉಗ್ರರು ನಿನ್ನೆ ಹೊಸ ದೇಶವೊಂದನ್ನು ಘೋಷಿಸಿದ್ದಾರೆ. ಆ ನೂತನ ಪ್ರಾಂತ್ಯದಲ್ಲಿ ಬಂಡುಕೋರರ ನಿಯಂತ್ರಣ ಪ್ರದೇಶಗಳೊಂದಿಗೆ ಇಡೀ ಉಕ್ರೇನ್ ಸೇರಿದೆ.  ಉಗ್ರರ ಈ ಹೊಸ ಘೋಷಣೆಯೊಂದಿಗೆ, 2015ರಲ್ಲಿ ಜಾರಿಗೆ ಬಂದ ಕದನವಿರಾಮ ಒಪ್ಪಂದ ಮುರಿದು ಬೀಳುವ ಸಾಧ್ಯತೆ ಇದ್ದು, ಮತ್ತೆ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇದೆ.  ಯುದ್ಧವಿರಾಮದಂತೆ, ಉಕ್ರೇನ್ ಕೈಗಾರಿಕಾ ಪ್ರದೇಶದಲ್ಲಿ ಘರ್ಷಣೆ ಅಂತ್ಯವಾಗಿ ಸ್ಥಳಗಳು ಉಕ್ರೇನ್ ಮರುವಶಕ್ಕೆ ಹೋಗಬೇಕಿತ್ತು ಹಾಗೂ ಅದಕ್ಕೆ ಪ್ರತಿಯಾಗಿ ಆ ಪ್ರದೇಶಕ್ಕೆ ಹೆಚ್ಚಿನ ಸ್ವಾಯತ್ತತೆ ಲಭಿಸಬೇಕಿತ್ತು.

ಪೂರ್ವ ಉಕ್ರೇನ್‍ನ ಹಲವು ಭಾಗಗಳನ್ನು ರಷ್ಯಾ ಬೆಂಬಲಿತ ಬಂಡುಕೋರರು 2014ರಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಆ ಬಳಿಕ ನಡೆದ ಕಾಳಗಗಳಲ್ಲಿ 10,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin