ಕಂಪೆನಿಯ ಡಾಟಾ ಬೇಸ್ ಹ್ಯಾಕ್ ಮಾಡಿ 1.14 ಕೋಟಿ ರೂ. ವಂಚನೆ

Data-Base-Hack--01

ತುಮಕೂರು, ಜು.19- ಖಾಸಗಿ ಕಂಪೆನಿಯೊಂದರ ಡಾಟಾ ಬೇಸ್‍ಅನ್ನು ಹ್ಯಾಕ್ ಮಾಡಿರುವ ವಂಚಕರು 1 ಕೋಟಿ 14 ಲಕ್ಷ ರೂ.ಗಳನ್ನು ಗುಳುಂ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.  ನಗರದ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿನ ಯುನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ. ಕಂಪೆನಿಯಲ್ಲಿ ಡಾಟಾಬೇಸ್‍ಅನ್ನು ಜೂ.23ರಂದು ವಂಚಕರು ಹ್ಯಾಕ್ ಮಾಡಿರುವುದು ತಡವಾಗಿ ಗೊತ್ತಾಗಿದ್ದು, ಇದೀಗ ಎನ್‍ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಂಪೆನಿಯ ಡಾಟಾಬೇಸ್‍ಅನ್ನು ಹ್ಯಾಕ್ ಮಾಡಿರುವ ವಂಚಕರು 60.6 ಬಿಪಿಸಿ (ಬಿಟ್ ಕಾಯಿನ್)ಯಿಂದ ವರ್ಗಾವಣೆ ಮಾಡಿಕೊಂಡಿದ್ದು, ಒಂದು ಬಿಪಿಸಿ ಮೌಲ್ಯ 1,67,471ರೂ.ಗಳಾಗಿದ್ದು, ಒಟ್ಟಾರೆ 1 ಕೋಟಿ 14 ಲಕ್ಷ ರೂ.ಗಳನ್ನು ವಂಚಿಸಲಾಗಿದೆ.

ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಎಂಬುವರು ಹಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದರಿಂದ ಕಂಗಾಲಾದ ಹರೀಶ್ ಅವರು ಬೆಂಗಳೂರಿನ ರಾಜಾಜಿನಗರದ ಪ್ರಧಾನ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯನ್ನು ಪರಿಶೀಲಿಸಿದಾಗ ಈ ಬಗ್ಗೆ ಯಾವುದೇ ಸುಳಿವು ತಿಳಿಯದ ಕಾರಣ ಪೊಲೀಸರ ಮೊರೆ ಹೋಗಿ ಎನ್‍ಇಪಿಎಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃತ್ತ ನಿರೀಕ್ಷಕ ಕೆ.ರಾಘವೇಂದ್ರ ಅವರನ್ನೊಳಗೊಂಡ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin