ಕೌಟುಂಬಿಕ ಕಲಹ : ಪತ್ನಿಯ ಕತ್ತುಹಿಸುಕಿ ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Rape--01

ಬೆಂಗಳೂರು, ಜು.19-ಕೌಟುಂಬಿಕ ವಿಚಾರವಾಗಿ ಜಗಳ ನಡೆದು ಪತಿಯೇ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಜಿಗಣಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಗೌರಿಬಿದನೂರಿನ ರಂಜನಿ ಕೊಲೆಯಾದ ನತದೃಷ್ಟೆ. ಹದಿನೈದು ವರ್ಷದ ಹಿಂದೆ ಕರಿತಿಮ್ಮಯ್ಯ ಎಂಬುವರನ್ನು ರಂಜನಿ ಮದುವೆಯಾಗಿದ್ದು, ಕುಂತಲರೆಡ್ಡಿ ಲೇಔಟ್‍ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ದಂಪತಿ ಹೌಸ್‍ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ದಂಪತಿ ನಡುವೆ ಆಗಾಗ್ಗೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ. ರಾತ್ರಿ ಸಹ ದಂಪತಿ ಜಗಳವಾಡಿದ್ದಾರೆ. ಇಂದು ಮುಂಜಾನೆ 6.30ರ ಸಮಯದಲ್ಲಿ ಕರಿತಿಮ್ಮಯ್ಯ ಪತ್ನಿಯೊಂದಿಗೆ ಜಗಳವಾಡಿ ರವಿಕೆಯಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ.  ಸುದ್ದಿ ತಿಳಿದ ರಂಜನಿ ಪೋಷಕರು ಬಂದು ಪೊಲೀಸರಿಗೆ ಕರಿತಿಮ್ಮಯ್ಯ ವಿರುದ್ಧ ದೂರು ನೀಡಿದ್ದಾರೆ.   ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin