ಗೋಮಾಂಸ ಕೊರತೆಯಾದರೆ ಕರ್ನಾಟಕದಿಂದ ಖರೀದಿ : ಗೋವಾ ಸಿಎಂ

Manohar-Parikkar-01

ಪಣಜಿ, ಜು.19-ಗೋವಾದಲ್ಲಿ ಗೋಮಾಂಸಕ್ಕೆ ಕೊರತೆಯಾಗದು. ಅಗತ್ಯವಿದ್ದರೆ ನೆರೆ ರಾಜ್ಯ ಕರ್ನಾಟಕದಿಂದ ಖರೀದಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.  ಗೋವಾ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ಕಂಡುಬಂದರೆ ನೆರೆರಾಜ್ಯಗಳಿಂದ ಗೋಮಾಂಸ ಖರೀದಿಸಲಾಗುತ್ತದೆ. ಹೀಗೆ ಪಡೆಯಲಾಗುವ ಗೋಮಾಂಸವನ್ನು ಪಶು ವೈದ್ಯರಿಂದ ತಪಾಸಣೆ ನಡೆಸಿದ ಬಳಿಕ ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿರುವ ಏಕೈಕ ಅಧಿಕೃತ ಕಸಾಯಿಖಾನೆ ಪೊಂಡದಲ್ಲಿರುವ ಗೋವಾ ಮೀಟ್ ಕಾಂಪ್ಲೆಕ್ಸ್‍ನಲ್ಲಿ ಪ್ರತಿದಿನ ಸುಮಾರು 2,000 ಕೆಜಿ ಗೋಮಾಂಸ ಲಭ್ಯವಾಗುತ್ತಿದೆ. ಉಳಿದ ಬೇಡಿಕೆಯನ್ನು ಕರ್ನಾಟಕದಿಂದ ಪೂರೈಸಲಾಗುವುದು. ಗೋವಾದ ಅಧಿಕೃತ ಕಸಾಯಿಖಾನೆಗೆ ಜಾನುವಾರುಗಳನ್ನು ವಧೆಗಾಗಿ ತರುವಿಕೆಗೆ ನಿರ್ಬಂಧ ವಿಧಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಪರಿಕ್ಕರ್ ತಿಳಿಸಿದರು.  ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಕರಾವಳಿ ರಾಜ್ಯ ಗೋವಾದಲ್ಲಿ ಶೇ.30ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರಿದ್ದು, ಇಲ್ಲಿ ಗೋಮಾಂಸ ಪ್ರಮುಖ ಆಹಾರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin