ನಾಗಾಲ್ಯಾಂಡ್ : ವಿಶ್ವಾಸ ಮತಯಾಚನೆಯಲ್ಲಿ ಮುಖ್ಯಮಂತ್ರಿ ವಿಫಲ, ಸದನ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Nagaland--01

ಕೊಹಿಮಾ, ಜು.19- ಅತಂತ್ರ ಸ್ಥಿತಿಗೆ ಸಿಲುಕಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟು ಮತ್ತವರ ಬೆಂಬಲಿಗರು ವಿಧಾನಸಭೆಯಲ್ಲಿ ಇಂದು ನಿಗದಿಯಾಗಿದ್ದ ವಿಶ್ವಾಸ ಮತಯಾಚನೆಗೆ ಗೈರು ಹಾಜರಾದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಈಶಾನ್ಯ ರಾಜ್ಯದ ರಾಜಕೀಯ ಸ್ಥಿರತೆ ತ್ರಿಶಂಕು ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಲೀಜೀಟು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಿತ್ತು. ರಾಜ್ಯಪಾಲ ಪಿ.ಬಿ.ಆಚಾರ್ಯ, ನಿನ್ನೆ ವಿಧಾನಸಭಾಧ್ಯಕ್ಷ ಇಮ್ಟಿವಾಪಂಗ್ ಅವರಿಗೆ ಸಿಎಂ ವಿಶ್ವಾಸ ಮತ ಯಾಚನೆಗಾಗಿ ಬೆಳಗ್ಗೆ 9.30ಕ್ಕೆ ವಿಶೇಷ ಅಧಿವೇಶನ ಕರೆಯುವಂತೆ ಸೂಚಿಸಿದ್ದರು.

ಆಡಳಿತಾರೂಢ ನಾಗಾಲ್ಯಾಂಡ್ ಪೀಪಲ್ ಫ್ರಂಟ್(ಎನ್‍ಪಿಎಫ್) ಪಕ್ಷದ 43 ಶಾಸಕರು ಲೀಜೀಟು ವಿರುದ್ಧ ಬಂಡಾಯ ಎದ್ದಿದ್ದರು.  ವಿಶ್ವಾಸಮತ ಯಾಚನೆಗೆ ತಡೆ ನೀಡುವಂತೆ ಕೋರಿದ್ದ ಲೀಜೀಟು ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಸಿಎಂ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದ ಮಾಜಿ ಮುಖ್ಯಮಂತ್ರಿ ಟಿ.ಆರ್.ಝೀಲಿಯಾಂಗ್ ಮತ್ತವರ ಬೆಂಬಲಿಗರು ಸದನದಲ್ಲಿ ಹಾಜರಾಗಿದ್ದರು. ಮುಖ್ಯಮಂತ್ರಿ ಅವರು ವಿಶ್ವಾಸಮತ ಸಾಬೀತು ಮಾಡಲು ಸದನದಲ್ಲಿ ಹಾಜರಿಲ್ಲ. ಹೀಗಾಗಿ ಈ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿಕೆ ನೀಡಿ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಸದನದ ಈ ಬೆಳವಣಿಗೆಯನ್ನು ರಾಜ್ಯಪಾಲರಿಗೆ ತಾವು ವರದಿ ಮಾಡುತ್ತೇವೆ. ಅವರು ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಧಾನಸಭಾಧ್ಯಕ್ಷರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin