ಪರಪ್ಪನ ಅಗ್ರಹಾರದಿಂದ ಶಿಫ್ಟ್ ಆಗಿದ್ದ ಕೈದಿ ಅಸ್ವಸ್ಥ

Parappana-Agrahara--01

ಬೆಳಗಾವಿ,ಜು.19- ಡಿಐಜಿ ರೂಪಾ ಮತ್ತು ಡಿಜಿಪಿ ಸತ್ಯನಾರಾಯಣ ರಾವ್ ನಡುವಿನ ಕಿತ್ತಾಟ ಪ್ರಕರಣದ ಹಿನ್ನೆಲೆಯಲ್ಲಿ ರೂಪಾ ಪರ ನಿಂತ ಪರಪ್ಪನ ಅಗ್ರಹಾರ ಜೈಲಿನ ಖೈದಿಗಳ ಪೈಕಿ ಹಿಂಡಲಗಾ ಜೈಲಿಗೆ ರವಾನೆಯಾದ. ಮೂವರು ಖೈದಿಗಳಲ್ಲಿ ಒಬ್ಬ ಖೈದಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಡಿಐಜಿ ರೂಪಾ ಅವರಿಗೆ ಜೈಲಿನ ಅವ್ಯವಹಾರ ಕುರಿತ ಮಾಹಿತಿ ನೀಡಿದ ಅನಂತಮೂರ್ತಿಯನ್ನು ಮನಬಂದಂತೆ ಹೊಡೆಯಲಾಗಿತ್ತು.

ಇದರಿಂದ ರಕ್ತ ಹೆಪ್ಪುಗಟ್ಟಿ ಮೂತ್ರ ವಿಸರ್ಜನೆಗೆ ತೊಂದರೆಯಾದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ಅನಂತಮೂರ್ತಿಯನ್ನು ದಾಖಲಿಸಿ ರಾತ್ರೋ ರಾತ್ರಿ ಅಧಿಕಾರಿಗಳು ಬಿಡುಗಡೆ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅಲ್ಲಗಳೆಯುತ್ತಿದ್ದಾರೆ. ನಗರದ ಹಿಂಡಲಗಾ ಜೈಲು ಅಧಿಕ್ಷಕ ಟಿ.ಪಿ. ಶೇಷ್ ಸಹ ಸತ್ಯನಾರಾಯಣ ಪರವಾಗಿ ಡಿಐಜಿ ರೂಪಾ ವಿರುದ್ದ ಪ್ರತಿಭಟನೆ ಮಾಡಿದ್ದನ್ನು ಸರಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin