ಬೆತ್ತಲೆ ವಿಡಿಯೋ ಬಗ್ಗೆ ಸಂಜನಾ ಪ್ರೆಸ್ ಮೀಟ್

ಈ ಸುದ್ದಿಯನ್ನು ಶೇರ್ ಮಾಡಿ

Sanjannaa

ಬೆಂಗಳೂರು ,ಜು.19- ನಾನು, 2 ಚಿತ್ರದಲ್ಲಿ ಬೆತ್ತಲಾಗಿ ಶೂಟಿಂಗ್ ಮಾಡಿಲ್ಲ. ನೀವ್ಯಾರಾದರೂ ಶೂಟಿಂಗ್ ಸ್ಪಾಟ್‍ಗೆ ಬಂದು ನೋಡಿದ್ದೀರಾ..? ಹೇಗೆ ನೀವೆಲ್ಲ ಸಂಜನ ಬೆತ್ತಲೆಯಾದರು ಎಂದು ಸುದ್ದಿ ಮಾಡುತ್ತಿದ್ದೀರಾ ಎಂದು ನಟಿ ಸಂಜನಾ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೀನ್‍ಗೆ ಸೀಜಿ ಟಚ್ ಸಿಕ್ಕಿದೆ. ಪಂಚೆ ಮತ್ತು ಸೆಲೊ ಟೇಪ್ ಹಾಕಿ ದೃಶ್ಯ ಮಾಡಿಕೊಂಡು ನಂತರ ಸೀಜಿನಲ್ಲಿ ಪಂಚೆ ಹಾಗೂ ಸೆಲೋ ಟೇಪ್‍ನ್ನು ರಿಮು ಮಾಡಲಾಗಿದೆ ಎಂದು ಸಂಜನಾ ಸ್ಪಷ್ಟನೆ ನೀಡಿದರು.

ಇವರಿಗೆ ಸಾಥ್ ನೀಡಿದ ನಿರ್ಮಾಪಕ ಕೆ.ಮಂಜು ಮಾತನಾಡಿ, ಸಂಜನಾ ಕೆರಿಯರ್ ಹಾಳು ಮಾಡಲೆಂದೇ ಯಾರೋ ಈ ರೀತಿ ಮಾಡಿದ್ದಾರೆ. ಇದರ ಸಂಜನಾ ಅವರದು ಯಾವುದೇ ತಪ್ಪಿಲ್ಲ. ಆದಷ್ಟು ಬೇಗ ವಾಣಿಜ್ಯ ಮಂಡಳಿಗೆ ಚಿತ್ರದ ನಿರ್ದೇಶಕ ಈ ದೃಶ್ಯ ವೈರಲ್ ಆಗಿರುವ ಬಗ್ಗೆ ಲೆಟರ್ ನೀಡಬೇಕು ಎಂದು ತಿಳಿಸಿದರು.  ಸಂಜನಾ ತಾಯಿ ಕೂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೃಶ್ಯ ಚಿತ್ರೀಕರಣವಾಗುವಾಗ ನಾನು ಕೂಡ ಜೊತೆಯಲ್ಲಿದ್ದೆ . ನಾವು ಕೂಡ ಸಂಪ್ರದಾಯವನ್ನು ಪಾಲಿಸುತ್ತೇವೆ ಎಂದು ಭಾವುಕರಾಗಿ ಹೇಳಿದರು.

ನಿರ್ದೇಶಕ ಹೈದರಾಬಾದ್‍ಗೆ ಹೋಗಿದ್ದಾರೆ. ಬಂದ ತಕ್ಷಣವೇ ಅವರ ಜೊತೆ ಮಾತನಾಡಿ, ವಾಣಿಜ್ಯ ಮಂಡಳಿಗೆ ದೂರು ಕೊಡುತ್ತೇವೆ. ಚಿತ್ರತಂಡದವರೇ ಯಾರಾದರೂ ಈ ದೃಶ್ಯವನ್ನು ವೈರಲ್ ಮಾಡಿರುವುದು ನಿಜ ಆದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಮಂಜು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin