ಭ್ರಷ್ಟಾಚಾರ ಮರೆಮಾಚಲು ಸರ್ಕಾರದಿಂದ ನಾಡಧ್ವಜ ವಿವಾದ : ಬಿಎಸ್‍ವೈ ಕಿಡಿ

Yadiyurappa--01

ಬೆಂಗಳೂರು,ಜು.19-ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ಆರೋಪಗಳನ್ನು ಮರೆಮಾಚುವ ದುರದ್ದೇಶದಿಂದಲೇ ನಾಡಧ್ವಜ ಸ್ಥಾಪನೆ ಸಮಿತಿ ರಚಿಸಿ ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕಿಡಿಕಾರಿದರು.  ಪಕ್ಷದ ಕಚೇರಿಯಲ್ಲಿ ರಾಜ್ಯ ಕುಂಬಾರರ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ಹಾಗೂ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಸಿ.ರಾಜಣ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯಾವುದೇ ರಾಜ್ಯಗಳಲ್ಲಿ ನಾಡಧ್ವಜಕ್ಕೆ ಸಂವಿಧಾನಬದ್ಧವಾದ ಮಾನ್ಯತೆ ಇಲ್ಲ ಎಂಬುದು ಗೊತ್ತೇ ಇದೆ.

ಆದರೆ ಸರ್ಕಾರದ ಮೇಲಿರುವ ಹಗರಣಗಳನ್ನು ಮರೆಮಾಚಲು ಇಂತಹ ಗಿಮಿಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ನಾನೇ ಮುಖ್ಯಮಂತ್ರಿಯಾಗಿದ್ದ ವೇಳೆ ನಾಡಧ್ವಜಕ್ಕೆ ಮಾನ್ಯತೆ ನೀಡುವಂತೆ ಯುಪಿಎ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಜಮ್ಮುಕಾಶ್ಮೀರ ಹೊರತುಪಡಿಸಿದರೆ ದೇಶದ ಯಾವುದೇ ರಾಜ್ಯಗಳು ಎರಡು ಧ್ವಜಗಳನ್ನು ಹೊಂದುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.   ಇದೆಲ್ಲ ಗೊತ್ತಿದ್ದರೂ ರಾಜ್ಯ ಸರ್ಕಾರ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಹೊರಟಿದೆ ಎಂದ ಅವರು, ಕನ್ನಡ ಭಾಷೆ ಬಗ್ಗೆ ನಮಗೂ ಅಪಾರವಾದ ಗೌರವವಿದೆ. ಕನ್ನಡ, ಜನ, ಭಾಷೆ, ನೆಲಜಲ, ಸಂಸ್ಕøತಿ ಆಚಾರ, ವಿಚಾರಗಳಲ್ಲಿ ನಾವೆಂದೂ ರಾಜಿಯಾಗುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದ ವೇಳೆ ಮಾತೃ ಭಾಷೆಗೆ ಸಾಕಷ್ಟು ನೆರವು ನೀಡಿತ್ತು. ಚುನಾವಣೆ ಬಂದಿರುವಾಗ ಇಂತಹ ವಿಷಯ ಬೇಕಿತ್ತೇ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ:

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಬಿಎಸ್‍ವೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು , ಜನರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭ್ರಷ್ಟ ಸರ್ಕಾರ ತೊಲುಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.   ಇದೇ ವೇಳೆ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ಬೆಂಬಲಿಗರು ಪಕ್ಷ ಸೇರ್ಪಡೆಯಾದರು. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ವಿಧಾನಪರಿಷತ್ ಸದಸ್ಯ ವೀರಯ್ಯ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin