ಮದುವೆಯಾಗುವುದಾಗಿ ಯಾಮಾರಿಸಿದ್ದ ವಂಚಕ ಟೆಕ್ಕಿ ಅರೆಸ್ಟ್

Mysuru-----01

ಮೈಸೂರು, ಜು.19- ವಿವಾಹವಾಗುವುದಾಗಿ ಯುವತಿಯನ್ನು ನಂಬಿಸಿ ವಂಚಿಸಿದ್ದ ಟೆಕ್ಕಿಯೊಬ್ಬನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುವೆಂಪು ನಗರದ ಎಂ ಬ್ಲಾಕ್ ನಿವಾಸಿ, ಖಾಸಗಿ ಕಂಪೆನಿಯ ಟೆಕ್ಕಿ ಪ್ರೇಮ್‍ಕುಮಾರ್ (28) ಬಂಧಿತ ಆರೋಪಿ. ಈತ 7-8 ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ತದನಂತರ ವಿವಾಹವಾಗುವುದಾಗಿ ನಂಬಿಸಿ, ಆಕೆಯೊಂದಿಗೆ ಅತಿಯಾದ ಸಲುಗೆ ಹೊಂದಿ ವಿವಿಧೆಡೆ ಸುತ್ತಾಡಿಸಿದ್ದಾನೆ.

ಕೆಲ ದಿನಗಳಿಂದ ಆಕೆ ಕರೆ ಮಾಡಿದರು ಈತ ಸ್ವೀಕರಿಸುತ್ತಿರಲಿಲ್ಲ. ಕೆಲವೊಂದು ವೇಳೆ ಕರೆ ಸ್ವೀಕರಿಸಿದರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಯುವತಿ ಆತನನ್ನು ಭೇಟಿ ಮಾಡಲು ಹೋದಾಗ ಆಘಾತವೆಂಬಂತೆ ಈತ ಬೇರೊಂದು ಯುವತಿಯೊಂದಿಗೆ ಸುತ್ತಾಡುತ್ತಿರುವುದನ್ನು ನೋಡಿದ್ದಾಳೆ. ಈತನಿಂದ ಮೋಸ ಹೋಗಿರುವುದನ್ನು ಅರಿತ ಯುವತಿ ಕುವೆಂಪು ನಗರ ಪೊ ಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin