ಮೂರು ಕಣ್ಣಿನ ವಿಚಿತ್ರ ಕರು ಜನನ

ಈ ಸುದ್ದಿಯನ್ನು ಶೇರ್ ಮಾಡಿ

Davanagere

ದಾವಣಗೆರೆ, ಜು.19- ಪ್ರತಿ ನಿತ್ಯ ಪ್ರಪಂಚದಲ್ಲೇ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇವುಗಳ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಇಲ್ಲೊಂದು ಹಸು ಮೂರು ಕಣ್ಣಿನ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಜಿಲ್ಲೆಯ ಜಗಳೂರು ತಾಲ್ಲೂಕಿನ ದಿದ್ದಿಗಿ ಗ್ರಾಮದ ನಿರ್ಮಲಾ ಎಂಬುವರಿಗೆ ಸೇರಿದ ಆಕಳು ಮೂರು ಕಣ್ಣುಗಳುಳ್ಳ ಕರುವಿಗೆ ಜನ್ಮ ನೀಡಿದೆ. ಹಣೆಯ ಮಧ್ಯ ಭಾಗದಲ್ಲಿ ಕಣ್ಣು ಇದ್ದು ಸಾಮಾನ್ಯ ಕಣ್ಣಿನಂತೆ ಅದು ಕಾರ್ಯ ನಿರ್ವಹಿಸುತ್ತಿದ್ದು , ಈ ಸುದ್ದಿ ಕಾಡ್ಗಿಚ್ಚಿನಂತೆ ಗ್ರಾಮದಲ್ಲಿ ಹರಡಿದ್ದು ಈ ವಿಸ್ಮಯವನ್ನು ವೀಕ್ಷಿಸಲು ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಕರುವು ಆರೋಗ್ಯವಾಗಿದ್ದು , ಪ್ರಕೃತಿಯ ವಿಸ್ಮಯ ಎಲ್ಲರನ್ನು ನಿಬ್ಬೆರಗುಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin