ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ತಹಸೀಲ್ದಾರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Tahasheeldar---Shankaraiah

ಟಿ.ನರಸೀಪುರ, ಜು.19- ತಹಸೀಲ್ದಾರ್‍ರೊಬ್ಬರು ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಿ.ಶಂಕರಯ್ಯ (57) ಆತ್ಮಹತ್ಯೆ ಮಾಡಿಕೊಂಡ ತಹಸೀಲ್ದಾರ್. ಮೂಲತಃ ಮಂಡ್ಯದವರಾದ ಇವರು ಟಿ.ನರಸೀಪುರದ ವಸತಿ ಗೃಹದಲ್ಲಿ ಒಬ್ಬರೇ ವಾಸವಾಗಿದ್ದು, ಕುಟುಂಬಸ್ಥರು ಮಂಡ್ಯದಲ್ಲಿದ್ದಾರೆ. ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಅಂಜೋಗ್ರಾಮ್ ಮಾಡಿಸಿಕೊಂಡಿದ್ದ ಇವರಿಗೆ ಹಾರ್ಟ್ ಆಪರೇಷನ್ ಮಾಡಿಸಬೇಕೆಂದು ವೈದ್ಯರು ತಿಳಿಸಿದ್ದರು. ರಜೆ ತೆಗೆದುಕೊಂಡು ಬರುತ್ತೇನೆ ಎಂದು ವೈದ್ಯರಿಗೆ ಹೇಳಿಬಂದಿದ್ದ ಇವರು ಇಂದು ಬೆಳಗ್ಗೆ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ.
ಶಂಕರಯ್ಯ ಅವರ ಮಗಳ ಮದುವೆ ಸೆಪ್ಟೆಂಬರ್‍ನಲ್ಲಿ ನಿಶ್ಚಯವಾಗಿದೆ ಎಂದು ತಿಳಿದುಬಂದಿದೆ.   ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin