ವಿವಾದದಲ್ಲಿ ಸಿಲುಕಿದ ಶೋಭಾ ಕರಂದ್ಲಾಜೆ

shobhakarandlaje

ನವದೆಹಲಿ/ಮಂಗಳೂರು,ಜು.19- ಹಲ್ಲೆಗೆ ಒಳಗಾದವರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದ ಹೆಸರೊಂದು ಹತ್ಯೆಗೀಡಾದವರ ಪಟ್ಟಿಯಲ್ಲಿ ಸೇರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಈಗ ವಿವಾದಕ್ಕೆ ಸಿಲುಕಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಶೋಭ ಕೊಲೆಗೀಡಾದ 23 ಮಂದಿಯಲ್ಲಿ ಮೂಡಬಿದಿರೆಯ ಅಶೋಕ್ ಪೂಜಾರಿ ಎಂಬ ವ್ಯಕ್ತಿಯ ಹೆಸರು ಉಲ್ಲೇಖಿಸಿದ್ದಾರೆ. ಆದರೆ ಆತ ಬದುಕಿದ್ದಾರೆ. ಅಶೋಕ್ ಪೂಜಾರಿ ಮೇಲೆ 2015ರ ಸೆಪ್ಟಂಬರ್ 20ರಂದು ತಂಡವೊಂದು ಮೂಡಬಿದರೆಯ ಹಂಡೇಲ್‍ನಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಅವರು ಗಾಯಗೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಶೋಭ ಕರಂದ್ಲಾಜೆ ಅವರು ಸಿದ್ದಪಡಿಸಿರುವ ಈ ಪತ್ರದಲ್ಲಿ ಕೊಲೆಗೀಡಾದವರಲ್ಲಿ ಅಶೋಕ ಪೂಜಾರಿ ಮೊದಲ ಸ್ಥಾನ ಪಡೆದಿದ್ದಾರೆ.

ಶೋಭಾ ಸ್ಪಷ್ಟನೆ: ಹಲ್ಲೆಗೆ ಒಳಗಾದವರ ಪಟ್ಟಿಯಲ್ಲಿ ಸೇರಿಸಬೇಕಾಗಿದ್ದ ಅಶೋಕ್ ಪೂಜಾರಿ ಹೆಸರು ಕಣ್ತಪ್ಪಿನಿಂದಾಗಿ ಹತ್ಯೆಗೀಡಾದವರ ಲಿಸ್ಟ್‍ನಲ್ಲಿ ಸೇರಿದೆ ಎಂದು ತಮ್ಮಿಂದ ಆದ ಲೋಪಕ್ಕೆ ಶೋಭಾ ವಿಷಾದಿಸಿದ್ದಾರೆ ಎಂದು ಬಿಜೆಪಿ ಪಕ್ಷದ ಕಾರ್ಯದರ್ಶಿ ಶಾಂತರಾಮ್ ತಿಳಿಸಿದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin