ವಿಷಕಾರಿ ಸಾಗರಜೀವಿ ಹಾವಳಿ, ಗೋವಾ ಕಿನಾರೆಯಲ್ಲಿ ಜನರು ನೀರಿಗಿಳಿಯದಂತೆ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Goa-Beach

ಪಣಜಿ, ಜು.19-ಕರಾವಳಿ ರಾಜ್ಯ ಗೋವಾದ ಕ್ಯಾಂಡೋಲಿಮ್-ಸಿನ್‍ಕ್ವೇರಿಮ್ ಸಮುದ್ರ ಪ್ರದೇಶದಲ್ಲಿ ವಿಷಪೂರಿತ ಅಂಗಗಳನ್ನು ಹೊಂದಿರುವ ಪೋರ್ಚುಗಿಸ್ ಮ್ಯಾನ್-ಆಫ್-ವಾರ್(ಬ್ಲೂಬಾಟಲ್) ಎಂಬ ಸಾಗರ ಜೀವಿಯ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಡಲ ಕಿನಾಲೆಯಲ್ಲಿರುವ ಜನರು ನೀರಿಗಿಳಿಯದಂತೆ ಜೀವರಕ್ಷಕ ಸಂಸ್ಥೆಯೊಂದು ಎಚ್ಚರಿಕೆ ನೀಡಿದೆ.  ಕ್ಯಾಂಡೋಲಿಮ್-ಸಿನ್‍ಕ್ವೇರಿಮ್ ಸಮುದ್ರದಂಡೆಯಲ್ಲಿ ನಿನ್ನೆ ನೀಲಿಶೀಷೆ ಎಂದು ಕರೆಯಲ್ಪಡುವ ಈ ಅಪಾಯಕಾರಿ ಜೀವಿ ಪತ್ತೆಯಾಗಿತ್ತು.

ಅಂಟುದ್ರವಗಳನ್ನು ಹೊಂದಿರುವ ಈ ಜೀವಿಯು ಮುಳ್ಳಿನಂಥ ಕಾಲುಗಳನ್ನು ಹೊಂದಿದ್ದು, ವಿಷಪೂರಿತವಾಗಿರುತ್ತದೆ. ಇದು ವೈರಿಗಳಿಗೆ ತನ್ನ ಗ್ರಹಣಾಂಗಗಳಿಂದ ದಾಳಿ ಮಾಡುತ್ತವೆ ಎಂದು ಜೀವರಕ್ಷಕ ಸಂಸ್ಥೆಯಾದ ದೃಷ್ಟಿ ಲೈಫ್ ಸೇವಿಂಗ್ ಏಜೆನ್ಸಿ ಜನರಿಗೆ ಎಚ್ಚರಿಕೆ ನೀಡಿದೆ. ಈ ಕಡಲ ಕಿನಾರೆಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸ್ಥಳೀಯರು ಸಮುದ್ರಕ್ಕೆ ಇಳಿಯಂತೆ ನಿಗಾವಹಿಸಬೇಕೆಂದು ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin