ಶಶಿಕಲಾಗೆ ರಾಜಾತಿಥ್ಯ ನೀಡಲು ಖಾಕಿಗೆ ಲಂಚ ಕೊಡಿಸಿದ್ದು ಓರ್ವ ಎನ್ಆರ್ ಐ..!

Sasikala-Jail-Bars---01

ಬೆಂಗಳೂರು, ಜು.19- ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಡಿಎಂಕೆಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲು ಕೋಟ್ಯಂತರ ರೂ.ಗಳನ್ನು ಜೈಲು, ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ ಎಂಬ ಪ್ರಕರಣದ ಹಿಂದೆ ರಾಜ್ಯ ಮೂಲದ ಎನ್ಆರ್ಐ ಒಬ್ಬರ ಕೈವಾಡವಿದೆ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಶಿಕಲಾ ನಟರಾಜನ್ ಅವರ ಸಂಬಂಧಿ ಟಿ.ಟಿ.ವಿ.ದಿನಕರನ್ ಅವರು ತಮ್ಮ ಪಕ್ಷದ ಎರಡೆಲೆ ಚಿನ್ಹೆ ಪಡೆಯಲು ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಎನ್ಆರ್ಐ ಒಬ್ಬರು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೂ ಹಣ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಐಡಿಎಂಕೆ ಪಕ್ಷದ ಅಧಿಕೃತ ಚಿನ್ಹೆಯಾದ ಎರಡೆಲೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಐದು ಕೋಟಿ ರೂ. ಲಂಚ ನೀಡಲು ಮುಂದಾಗಿದ್ದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಇವರೇ ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೂ ಕೂಡ ಎಐಡಿಎಂಕೆ ಮುಖಂಡರಿಂದ ಭಾರೀ ಪ್ರಮಾಣದ ಲಂಚ ಕೊಡಿಸಿದ್ದಾರೆ ಎನ್ನಲಾಗಿದೆ. ತುಮಕೂರು ಮೂಲದವರಾದ ಇವರು ಆಸ್ಟ್ರೇಲಿಯಾದಲ್ಲಿ ಎನ್ಆರ್ಐ ಪೋರಂ ಎಂಬ ಸಂಸ್ಥೆ ನಡೆಸುತ್ತಿದ್ದ ಇವರು ಈಗ ಲಂಚ ಆರೋಪ ಪ್ರಕರಣದ ಕಿಂಗ್ಪಿನ್ ಎಂದು ಹೇಳಲಾಗಿದೆ. ಜೈಲಿನ ಹಿರಿಯ ಅಧಿಕಾರಿಗಳ ಸಂಪರ್ಕ ಸಾಧಿಸಿ ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಿಸಿ ಮತ್ತು ಸುಧಾಕರನ್ಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಡಿಜಿಪಿ ಸತ್ಯನಾರಾಯಣ್ರಾವ್ ವಿರುದ್ಧ ಡಿಐಜಿ ರೂಪಾ ಅವರು ಶಶಿಕಲಾ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲು ಎರಡು ಕೋಟಿ ನೀಡಲಾಗಿದೆ ಎಂದು ಆರೋಪ ಮಾಡಿದ್ದರು.   ಅಲ್ಲದೆ, ಜೈಲಿನಲ್ಲಿ ಅವರಿಗೆ ನೀಡುತ್ತಿರುವ ಸೌಲಭ್ಯಗಳು ಮಾಧ್ಯಮಗಳಲ್ಲಿ ಬಹಿರಂಗ ಗೊಂಡು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಅಧಿಕಾರಿಗಳ ನಡುವೆ ಸಂಘರ್ಷ ಉಂಟಾಗಿತ್ತು.   ಅಧಿಕಾರಿಗಳ ಪರ, ವಿರೋಧದ ಪ್ರತಿಭಟನೆ ಗಳು, ಧಿಕ್ಕಾರದ ಘೋಷಣೆಗಳು ಮೊಳಗಿದ್ದವು. ಸರ್ಕಾರ ಈ ಇಬ್ಬರು ಅಧಿಕಾರಿಗಳು ಮತ್ತು ಜೈಲು ಅಧೀಕ್ಷಕರನ್ನು ವರ್ಗಾವಣೆ ಮಾಡಿ ತ್ತಲ್ಲದೆ, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಅವ್ಯವಹಾರದ ಬಗ್ಗೆ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್ಕುಮಾರ್ ಅವರನ್ನು ನೇಮಿಸಿದೆ. ಇದಕ್ಕೂ ಮುನ್ನ ಜೈಲಿನಲ್ಲಿ ಅಧಿಕಾರಿಗಳ ಪರ-ವಿರೋಧದ ಘರ್ಷಣೆ ನಡೆದು 30ಕ್ಕೂ ಹೆಚ್ಚು ಕೈದಿಗಳನ್ನು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಯಿತು.

ಶಶಿಕಲಾ ಅವರಿಗೆ ನೀಡಿರುವ ವಿಶೇಷ ಸೌಲಭ್ಯಗಳು ರಾಷ್ಟ್ರೀಯ ಮಾಧ್ಯಮಗಳಲ್ಲೂ ಬಿತ್ತರಗೊಂಡಿದ್ದವು.   ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಹಣದ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಇದರ ಹಿಂದೆ ಎನ್ಆರ್ಐ ಒಬ್ಬರ ಕೈವಾಡವಿದೆ. ಅವರ ಮೂಲಕವೇ ಜೈಲು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಹಣ ಹೋಗಿತ್ತು ಎಂದು ತಿಳಿದು ಬಂದಿದ್ದು, ಈ ಸಂಬಂಧವೂ ಕೂಡ ತನಿಖೆ ನಡೆಯುತ್ತಿದೆ.  ಶಶಿಕಲಾ ಅವರಿಗೆ ಕಲ್ಪಿಸಿರುವ ಐಷಾರಾಮಿ ವ್ಯವಸ್ಥೆಗಳ ಹಿಂದೆ ಭಾರೀ ಪ್ರಮಾಣದ ಹಣದ ವಹಿವಾಟು, ಪೊಲೀಸ್ ಅಧಿಕಾರಿಗಳು ಮತ್ತಿತರರು ಶಾಮೀಲಾಗಿರುವ ಸಾಧ್ಯತೆಯ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಜೈಲಿನಲ್ಲಿ ಗಾಂಜಾ, ಸಿಗರೇಟ್, ಮೊಬೈಲ್ ಬಳಕೆ ಮುಂತಾದ ವಿಷಯಗಳು ಅಷ್ಟೂ ಪರಿಣಾಮ ಬೀರಿರಲಿಲ್ಲ. ಎಐಎಡಿಎಂಕೆ ಪ್ರಧಾನಕಾರ್ಯದರ್ಶಿ ಶಶಿಕಲಾ ಅವರಿಗೆ ರಾಜಾತಿಥ್ಯ ಕಲ್ಪಿಸಿರುವ ಬಗ್ಗೆ ಮತ್ತು ಅದಕ್ಕೆ ಭಾರೀ ಪ್ರಮಾಣದಲ್ಲಿ ಹಣ ಪಡೆದಿರುವ ಬಗ್ಗೆ ಕೇಳಿ ಬಂದಿರುವ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿತ್ತು. ಹಲವು ಅಧಿಕಾರಿಗಳ ವರ್ಗಾವಣೆಗೂ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin