75 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದಂಪತಿ ಮೃತದೇಹ ನೀರ್ಗಲ್ಲಿನಲ್ಲಿ ಪತ್ತೆ..!

Dead-Body--01

ಜಿನಿವಾ(ಸ್ವಿಟ್ಜರ್‍ಲೆಂಡ್), ಜು.19-ಹಿಮಾಚ್ಛಾದಿತ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿ ಸುಮಾರು 75 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಸ್ವಿಡ್ಜರ್‍ಲೆಂಡ್ ದಂಪತಿಯ ಮಂಜುಗಟ್ಟಿದ ದೇಹಗಳು ನೀರ್ಗಲ್ಲೊಂದರಲ್ಲಿ ಪತ್ತೆಯಾಗಿದೆ ಎಂದು ಸ್ವಿಸ್ ಮಾಧ್ಯಮಗಳು ವರದಿ ಮಾಡಿವೆ.  ಏಳು ಮಕ್ಕಳ ಪೋಷಕರಾಗಿದ್ದ ಮಾರ್ಸಿಲಿನ್ ಮತ್ತು ಫ್ರಾನ್ಸ್‍ನೈನ್ ಡುಮುಲಿನ್ ದಂಪತಿ ಆಗಸ್ಟ್ 15, 1942ರಂದು ವಲಾಯಿಸ್ ಕೌಂಟಿಯಲ್ಲಿರುವ ಚಾಂಡೋಲಿನ್ ಗ್ರಾಮದ ಮೇಲ್ಭಾಗದಲ್ಲಿರುವ ಹುಲ್ಲುಗಾವಲಿನಲ್ಲಿ ತಮ್ಮ ಹಸುಗಳಿಂದ ಹಾಲು ಕರೆಯಲು ಹೋಗಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದರು. 40 ವರ್ಷದ ಮಾರ್ಸಿಲಿನ್ ಚಪ್ಪಲಿ ತಯಾರಕರಾಗಿದ್ದರು ಹಾಗೂ 37 ವರ್ಷದ ಡುಮುಲಿನ್ ಶಿಕ್ಷಕಿಯಾಗಿದ್ದರು.

ಕಳೆದ ವಾರ ಕಾರ್ಮಿಕರೊಬ್ಬರು ಸಾನ್‍ಪ್ರೋರನ್ ನೀರ್ಗಲ್ಲಿನಲ್ಲಿ ಕಾಮಗಾರಿಯೊಂದರಲ್ಲಿ ತೊಡಗಿದ್ದರು. ಆಗ 2,615 ಮೀಟರ್ ಎತ್ತರದಲ್ಲಿ ದಂಪತಿಯ ಶವಗಳು ಪತ್ತೆಯಾಗಿದ್ದವು. ಅವರಿಬ್ಬರ ಗುರುತುಗಳೂ ಸಹ ಅಲ್ಲೇ ಕಂಡುಬಂದವು.  ನಾವು ಈವರೆಗೂ ತಂದೆ-ತಾಯಿ ಬಗ್ಗೆ ಯಾವುದೇ ಮಾಹಿತಿ ನಮಗೆ ಲಭಿಸಿರಲಿಲ್ಲ. ಈಗ ಅವರ ಮೃತದೇಹ ಪತ್ತೆಯಾಗಿರುವ ಸುದ್ದಿ ತಿಳಿದಿದೆ ಎಂದು ದಂಪತಿಯ ಕಿರಿಯ ಪುತ್ರಿ 79 ವರ್ಷದ ಮರ್ಸಿಲಿನ್ ಉಡ್ರಿ ಡುಮುಲಿನ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin