ಕ್ಯಾನ್ಸರ್‍ಗೆ ವಿನೂತನ ಡಬಲ್ ಬಲೂನ್ ಎಂಟರೋಸ್ಕೋಪಿ ಚಿಕಿತ್ಸೆ

Health--01

ಪಾರ್ಕ್‍ವೇ ಪೆಂಟೈ ಸಂಸ್ಥೆಯಬಿಜಿಎಸ್ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ರೋಗಿಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೀಗ ಡಬಲ್ ಬಲೂನ್ ಎಂಟರೋಸ್ಕೋಪಿ (ಡಿಬಿಇ) ಎಂಬ ವಿನೂತನವಾದ ಚಿಕಿತ್ಸಾ ವ್ಯವಸ್ಥೆಯನ್ನು ಆರಂಭಿಸಿದೆ. ಈ ವಿಧಾನದಲ್ಲಿ ವಿಶೇಷವಾದ ಎಂಟರೋಸ್ಕೋಪಿ ಕ್ಯಾಮೆರಾದ ಒಂದು ತುದಿಯಲ್ಲಿ ಬಲೂನ್ ಅನ್ನು ಅಳವಡಿಸಲಾಗಿರುತ್ತದೆ ಮತ್ತು ಎಂಡೋಸ್ಕೋಪ್‍ನಲ್ಲಿ ಓವರ್ ಟ್ಯೂಬ್ ಅನ್ನು ಅಳವಡಿಸಲಾಗಿರುತ್ತದೆ. ಈ ಓವರ್ ಟ್ಯೂಬ್ ಅನ್ನು ಬಲೂನ್‍ಗೆ ಜೋಡಿಸಲಾಗಿರುತ್ತದೆ. ಈ ವಿಧಾನವನ್ನು ಸಾಮಾನ್ಯ ಅನಸ್ತೇಶಿಯಾ ಮೂಲಕ ಮಾಡಲಾಗುತ್ತದೆ. ಆದರೆ, ಪ್ರಜ್ಞಾಪೂರ್ವಕ ನಿದ್ರಾವಸ್ಥೆಯಲ್ಲಿಯೇ ಮಾಡಲಾಗುತ್ತದೆ. ಸಣ್ಣ ಕರುಳಿನ ತಪಾಸಣೆ ಮಾಡುವ ನಿಟ್ಟಿನಲ್ಲಿ ಡಿಬಿಇ ಒಂದು ಸಮರ್ಪಕ, ಆಕ್ರಮಣಶೀಲವಲ್ಲದ ಮತ್ತು ಅನುಕೂಲಕರವಾದ ವಿಧಾನವಾಗಿದೆ.

ಈ ಪರೀಕ್ಷಾ ವಿಧಾನದಿಂದ ರೋಗಿಯ ಅಸ್ವಸ್ಥತೆ ಮತ್ತು ತೊಡಕಿನ ಪ್ರಮಾಣ ಕಡಿಮೆ ಇರುತ್ತದೆ. ಸಣ್ಣ ಕರುಳಿನಲ್ಲಿನ ಸಮಸ್ಯೆಯ ಆಧಾರದಲ್ಲಿ ಡಿಬಿಇ ಶಸ್ತ್ರಚಿಕಿತ್ಸೆಗೆ ಪರ್ಯಾಯವಾದ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತದೆ. ಬಿಜಿಎಸ್ ಗ್ಲೆನೀಗಲ್ಸ್ ಹಾಸ್ಪಿಟಲ್ಸ್‍ನಲ್ಲಿ ಡಿಬಿಇಯನ್ನು 57 ವರ್ಷ ವಯಸಿನ ರೋಗಿಗೆ ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಈ ಡಿಬಿಇಯನ್ನು ಬಳಕೆ ಮಾಡಲಾಗಿದೆ. ಇದಕ್ಕೂ ಮುನ್ನ ರೋಗಿಯು ಕ್ಯಾನ್ಸರ್ ರೋಗಮುಕ್ತಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು, ಹಲವು ಬಾರಿ ಕಿಮೋಥೆರಪಿ, ರೇಡಿಯೇಶನ್‍ಗೆ ಒಳಗಾಗಿದ್ದರು.

ಈ ಚಿಕಿತ್ಸೆಗಳಿಂದ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಿ ಮಲದಲ್ಲಿ ರಕ್ತ ಕಾಣಿಸಿಕೊಳ್ಳಲಾರಂಭಿಸಿತು. ಈ ರಕ್ತಸ್ರಾವಕ್ಕೆ ಕಾರಣವೇನೆಂದು ಪತ್ತೆ ಮಾಡುವ ಸಂಬಂಧ ಅವರನ್ನು ಕ್ಯಾಪ್ಸೂಲ್ ಎಂಡೋಸ್ಕೋಪಿಗೆ ಒಳಪಡಿಸಲಾಯಿತು. ಈ ಕ್ಯಾಪ್ಸೂಲ್‍ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸಣ್ಣ ಕರುಳಿನ ಸುತ್ತಮುತ್ತಲಿನ ಚಿತ್ರಣಗಳನ್ನು ಅವಲೋಕಿಸಲಾಯಿತು. ಅಂತಿಮವಾಗಿ ಸಣ್ಣ ಕರುಳಿನಲ್ಲಿ ಹೊಸದಾಗಿ ಅಸಹಜವಾದ ರಕ್ತನಾಳಗಳು ಇರುವುದು ಪತ್ತೆಯಾಯಿತು. ಇದರಿಂದಾಗಿ ರೋಗಿಯ ಪರಿಸ್ಥಿತಿ ಗಂಭೀರವಾಗಿ ರಕ್ತಸ್ರಾವದಿಂದ ಉಂಟಾಗುತ್ತಿದ್ದ ರಕ್ತದ ಕೊರತೆಯನ್ನು ಸರಿದೂಗಿಸಲೆಂದು ವಾರಕ್ಕೆ ಎರಡು ಬಾರಿ ರಕ್ತವನ್ನು ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ಗೆ ಶಿಫಾರಸು ಮಾಡಲಾಯಿತು.

ಇಂತಹ ಗಂಭಿರವಾದ ಪರಿಸ್ಥಿತಿಯಲ್ಲಿ ವೈದ್ಯರಿಗಿದ್ದ ಆಯ್ಕೆಯೆಂದರೆ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಮತ್ತು ಸಣ್ಣ ಕರುಳಿನ ಬಹುತೇಕ ಭಾಗವನ್ನು ತೆಗೆದುಹಾಕುವುದಾಗಿತ್ತು. ಆದರೆ, ಹೀಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೆ ರೋಗಿಯ ತೂಕ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರತೆಗೆ ತಲುಪಲಿದೆ, ಡಯೇರಿಯಾ ಹೆಚ್ಚಾಗಲಿದೆ ಎಂಬ ಆತಂಕ ಎದುರಾಗಿತ್ತು. ಈ ಆತಂಕಗಳನ್ನು ಮೆಟ್ಟಿ ನಿಂತು ರೋಗಿಯನ್ನು ಗುಣಮುಖರಾಗುವಂತೆ ಮಾಡುವುದನ್ನು ಸವಾಲಾಗಿ ಸ್ವೀಕರಿಸಿ ಡಬಲ್ ಬಲೂನ್ ಎಂಟರೋಸ್ಕೋಪಿ ಮೂಲಕ ನೇರವಾಗಿ ಸಣ್ಣ ಕರುಳಿನ ಭಾಗವನ್ನು ತಲುಪಲಾಯಿತು. ಇದರ ಮೂಲಕ ರೋಗಿಯ ಆರೋಗ್ಯ ಸ್ಥಿತಿಯನ್ನು ನಿಖರವಾಗಿ ಪರೀಕ್ಷಿಸಲಾಯಿತು. ಇದರಿಂದ ರೋಗಿಯನ್ನು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದನ್ನು ತಪ್ಪಿಸಲಾಯಿತು. ಮತ್ತೊಂದು ವಿಶೇಷ ಸಾಧನ ಅಥವಾ ಉಪಕರಣವಾದ ಎಪಿಸಿ (ಆರ್ಗನ್ ಪ್ಲಾಸ್ಮಾ ಕೋಆಗ್ಯುಲೇಶನ್) ಮೂಲಕ ಬೆಳೆದಿದ್ದ ಅಸಹಜ ರಕ್ತನಾಳಗಳನ್ನು ನಾಶಪಡಿಸಲಾಯಿತು. ಈ ಚಿಕಿತ್ಸಾ ವಿಧಾನ ಅನೇಸ್ತೇಶಿಯಾದೊಂದಿಗೆ ಕೇವಲ 1 ಗಂಟೆ ಅವಧಿಯಲ್ಲಿ ಪೂರ್ಣಗೊಂಡಿತು. ನಂತರ ರೋಗಿಯನ್ನು ಒಂದು ದಿನದಲ್ಲಿ ಡಿಸ್‍ಚಾರ್ಜ್ ಮಾಡಲಾಯಿತು.

ಈ ಚಿಕಿತ್ಸೆ ಪಡೆದ ಅರ್ಧ ವರ್ಷದಲ್ಲಿ ಎಂದಿಗೂ ರಕ್ತಸ್ರಾವದ ಅನುಭವ ಹೊಂದಲಿಲ್ಲ ಮತ್ತು ಆರೋಗ್ಯವಂತರಾಗಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಇದಲ್ಲದೇ, ಅವರಿಗೆ ರಕ್ತ ಹಾಕಿಸುವ ಪ್ರಮೇಯವೇ ಬಂದಿಲ್ಲ. ಸಣ್ಣ ಕರುಳಿನಲ್ಲಿ ಎದುರಾಗುವ ಸಮಸ್ಯೆಗಳು, ಗಡ್ಡೆ, ಅತಿಸಾರ, ನೋವು, ಗ್ಯಾಸ್ಟ್ರೋಇಂಟಸ್ಟಿನಲ್ ಬ್ಲೀಡಿಂಗ್ ಅನ್ನು ಪತ್ತೆ ಮಾಡಿ ಅವುಗಳನ್ನು ನಿರ್ಮೂಲನೆ ಮಾಡಲು ಈ ಡಿಬಿಇ ಚಿಕಿತ್ಸೆ ವಿಧಾನದಿಂದ ಸಫಲರಾಗಬಹುದು. ಈ ಚಿಕಿತ್ಸಾ ವಿಧಾನ ರೋಗಿ ಮತ್ತು ವೈದ್ಯರಿಬ್ಬರಿಗೂ ಅತ್ಯಂತ ಹೆಚ್ಚು ನೆರವಾಗುವ ವಿಧಾನವಾಗಿದೆ. ಎಂಡೋಸ್ಕೋಪಿ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಿಂದ ತಪ್ಪು ತಪಾಸಣೆಗೆ ಒಳಗಾಗುವ ಹಲವಾರು ರೋಗಿಗಳನ್ನು ಉಳಿಸಲು ಈ ಡಿಬಿಇ ಚಿಕಿತ್ಸಾ ವಿಧಾನ ನೆರವಾಗಿದೆ. ಈ ಡಿಬಿಇ ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಪೂರ್ಣಗೊಳ್ಳುವ ಚಿಕಿತ್ಸಾ ವಿಧಾನವಾಗಿದೆ. ಈ ಚಿಕಿತ್ಸೆ ಆದ ಬಳಿಕ ಅದೇ ದಿನ ಅಥವಾ ಮರುದಿನ ರೋಗಿಯನ್ನು ಡಿಸ್‍ಚಾರ್ಜ್ ಮಾಡಲಾಗುತ್ತದೆ. ಇದೊಂದು ಶಸ್ತ್ರಚಿಕಿತ್ಸೆ ರಹಿತವಾದ, ಆತಂಕವಿಲ್ಲದ ಮತ್ತು ಕಡಿಮೆ ದರದಲ್ಲಿ ಸಿಗುವ ಚಿಕಿತ್ಸೆಯಾಗಿದೆ.

ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ನಲ್ಲಿ ನುರಿತ ಮತ್ತು ಖ್ಯಾತ ಗ್ಯಾಸ್ಟ್ರೋಎಂಟರೋಲಾಜಿಸ್ಟ್‍ಗಳ ತಂಡವಿದೆ. ಇವರು ಗ್ಯಾಸ್ಟ್ರೋಎಂಟರೋಲಾಜಿ ಬಗ್ಗೆ ಬಂದಿರುವ ಸುಧಾರಿತ ಮತ್ತು ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಪದ್ಧತಿ ಬಗ್ಗೆ ಅಧ್ಯಯನ ಮತ್ತು ತರಬೇತಿ ಹೊಂದಿದ್ದಾರೆ.  ಈ ವಿಧಾನಗಳ ಮೂಲಕ ವೈದ್ಯರು ರೋಗಿಗಳು ಎದುರಿಸುವ ಗ್ಯಾಸ್ಟ್ರೋಎಂಟರೋಲಾಜಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲಿದ್ದಾರೆ. ಇಲ್ಲಿನ ಚಿಕಿತ್ಸಾ ವಿಧಾನ ವಿಶೇಷವಾದುದಾಗಿದೆ. ಎಂತಹ ಗಂಭೀರ ಸಮಸ್ಯೆ ಇದ್ದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲಂತಹ ಅತ್ಯುತ್ತಮ ವೈದ್ಯರಿದ್ದಾರೆ ಎಂದು ಆಸ್ಪತ್ರೆಯ ಡಾ.ಬಿ.ಎಸ್. ರವೀಂದ್ರ ಮತ್ತು ಡಾ.ಥಾಮಸ್ ಮ್ಯಾಥ್ಯೂ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin