ಗಾಂಧೀಜಿ ಪ್ರಾಣ ಉಳಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಭಿಲಾರೆ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Bhiku-Daji-Bhilare

ನವದೆಹಲಿ, ಜು.20-ಒಂದು ಬಾರಿ ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಗಾಂಧೀಜಿ ಅವರ ಜೀವ ಉಳಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭಿಕು ದಾಜಿ ಭಿಲಾರೆ ಮಹಾರಾಷ್ಟ್ರದಲ್ಲಿ ನಿನ್ನೆ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಗಾಂಧಿಯವರನ್ನು ಗೋಡ್ಸೆ ಹತ್ಯೆ ಮಾಡಲು ಆರು ಬಾರಿ ಪ್ರಯತ್ನಿಸಿದ್ದು, 1944ರಲ್ಲಿ ಮಹಾರಾಷ್ಟ್ರದ ಪಂಚಗನಿಯಲ್ಲಿ ಭಿಲಾರೆ, ಗಾಂಧೀಜಿಯವರ ಪ್ರಾಣ ರಕ್ಷಿಸಿದ್ದರು. ಗೋಡ್ಸೆ 1948ರಲ್ಲಿ ದೆಹಲಿಯ ಬಿಲಾನ್‍ಹೌಸ್‍ನಲ್ಲಿ ಗಾಂಧಿ ಅವರನ್ನು ಕೊಂದಿದ್ದ.

ಎರಡು ಬಾರಿ ಮಹಾಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿದ್ದ ಭಿಲಾರೆ ಸಾಮಾಜಿಕ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಹಕ್ಕು ಮತ್ತು ಬೇಡಿಕೆಗಳಿಗಾಗಿ ಸದಾಕಾಲ ಹೋರಾಟ ನಡೆಸುತ್ತಿದ್ದರು. 1944ರ ಜುಲೈನಲ್ಲಿ ಪುಣೆಯ ಆಗಖಾನ್ ಪ್ಯಾಲೇಸ್ ಜೈಲಿನಿಂದ ಬಿಡುಗಡೆಯಾಗಿದ್ದ ಗಾಂಧೀಜಿ ಚೇತರಿಸಿಕೊಳ್ಳಲು ಪಂಚಗನಿಗೆ ತೆರಳಿದ್ದರು. ಅವರು ಒಂದು ಸಂಜೆ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಗೋಡ್ಸೆ ಗಾಂಧಿ ಅವರನ್ನು ಚೂರಿಯಿಂದ ಇರಿಯಲು ಯತ್ನಿಸಿದ್ದ. ಇದನ್ನು ಗಮನಿಸಿದ ಭಿಲಾರೆ ಗೋಡ್ಸೆಗೆ ಅಡ್ಡವಾಗಿ ನಿಂತು ಆತನ ಕೈಯಲ್ಲಿದ್ದ ಚೂರಿಯನ್ನು ಕಸಿದುಕೊಂಡು ಗಾಂಧೀಜಿ ಪ್ರಾಣ ಉಳಿಸಿದ್ದರು.

ಗಣ್ಯರ ಸಂತಾಪ: ಭಿಲಾರೆ ಅಂತ್ಯಕ್ರಿಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಅನೇಕ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin