ನಾನೀಗ ಯಾವ ಪಕ್ಷದಲ್ಲೂ ಇಲ್ಲ. ಯಾವ ಪಕ್ಷಕ್ಕೂ ಕೆಲಸ ಮಾಡಲ್ಲ : ಲಲಿತಾನಾಯಕ್

ಈ ಸುದ್ದಿಯನ್ನು ಶೇರ್ ಮಾಡಿ

Lalitanayak--01

ಬೆಂಗಳೂರು, ಜು.20-ನಾನೀಗ ಯಾವ ಪಕ್ಷದಲ್ಲೂ ಇಲ್ಲ. ಯಾವ ಪಕ್ಷಕ್ಕೂ ಕೆಲಸ ಮಾಡಲ್ಲ. ಮಹಿಳಾ ಮೀಸಲಾತಿಗಾಗಿ ಹೋರಾಟ ಮಾಡಿದ್ದರಿಂದ ದೇವೇಗೌಡರು ಸಮಾವೇಶಕ್ಕೆ ಕರೆದಿದ್ದರು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್ ತಿಳಿಸಿದರು.
ನಗರದ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಯಾವ ರಾಜಕೀಯ ಹಂಬಲವೂ ಇಲ್ಲ. ಹಾಗಾಗಿ ಯಾವ ಪಕ್ಷದಲ್ಲೂ ಕೆಲಸ ಮಾಡುವುದಿಲ್ಲ ಎಂದರು.

ಸಮಾಜ ಸೇವೆಯಲ್ಲಿ ನಿರತಳಾಗಿದ್ದೇನೆ. ಅದನ್ನೇ ಮುಂದುವರೆಸುತ್ತೇನೆ ಎಂದು ಹೇಳಿದರು. ದೇವೇಗೌಡರ ಜೊತೆ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದೇನೆ. ಚಿಕ್ಕವರು ಮುಂದೆ ಬರಲಿ ಎಂಬ ಕಾರಣಕ್ಕೆ ನಾನು ರಾಜಕೀಯದಿಂದ ಹಿಂದೆ ಸರಿದಿದ್ದೇನೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.
ರಾಜಕೀಯದಿಂದ ಹಿಂದೆ ಸರಿದಿದ್ದರೂ ನಿವೃತ್ತಿಯಾಗಿಲ್ಲ. ನನಗಿಂತ ದೇವೇಗೌಡರು ಆರು ತಿಂಗಳು ದೊಡ್ಡವರು. ಅವರ ಜೊತೆಯಲ್ಲೇ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದೇನೆ. ದೇವೇಗೌಡರು ರಾಜಕೀಯ ಬಿಟ್ಟಾಗ ನಾನು ಬಿಡುತ್ತೇನೆ. ದೇವರು ಕರೆಸಿಕೊಳ್ಳುವ ತನಕ ರಾಜಕೀಯದಲ್ಲಿ ಮುಂದುವರೆಯುವೆ ಎಂದು ತಿಳಿಸಿದರು.

ಎಂದಿಗೂ ನಾನು ಪಕ್ಷವನ್ನು ಬದಲಾಯಿಸಿಲ್ಲ. ಹಣ, ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿದವರು ಅದೆಷ್ಟೋ ಮಂದಿ. ದೇವೇಗೌಡರ ಜೊತೆಯಲ್ಲೇ ಇದ್ದವರು ಹಣಕ್ಕಾಗಿ ಪಕ್ಷ ಬಿಟ್ಟರು. ಅಂಥವರಿಗೆ ಮುಂದಿನ ಚುನಾವಣೆಯಲ್ಲಿ ಮತ ನೀಡುತ್ತೀರಾ ಎಂದು ಪ್ರಶ್ನಿಸುವ ಮೂಲಕ ಪಕ್ಷ ಬಿಟ್ಟ ಭಿನ್ನರಿಗೆ ಚಾಟಿ ಬೀಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin