ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನದಲ್ಲಿರುತ್ತೇನೆ : ನಿಯೋಜಿತ ರಾಷ್ಟ್ರಪತಿ ಕೊವಿಂದ್

Ram-Nath-Kovidn

ನವದೆಹಲಿ. ಜು.20 : ನಾನು ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನದಲ್ಲಿರುತ್ತೇನೆ, ಬಡವರ ಮಧ್ಯೆಯೇ ಹುಟ್ಟಿ ದೊಡ್ಡ ಹುದ್ದೆಗೇರಿದ್ದೇನೆ, ರಾಷ್ಟ್ರಪತಿಯಾಗುತ್ತೇನೆಂದು ನಾನೆಂದು ಯೋಚಿಸಿರಲಿಲ್ಲ, ಇದೊಂದು ನನ್ನ ಜೀವನದ ಭಾವುಕ ಕ್ಷಣ, ಎಂದು ನಿಯೋಜಿತ ರಾಷ್ಟ್ರಪತಿ ನಾಮ್ ನಾಥ್ ಕೊವಿಂದ್ ಹೇಳಿದ್ದಾರೆ.  ಚುನಾವಣಾ ಆಯೋಗ ಫಲಿತಾಂಶ ಘೋಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋವಿಡ್ನ ಅವರು ನನ್ನ ಮೇಲೆ ವಿಶ್ವಾಸ ಇತ್ತು ಮತ ಹಾಕಿರುವ ಎಲ್ಲರಿಗೂ ಧನ್ಯವಾದಗಳು. ದೇಶದ ಹಿತಕ್ಕಾಗಿ ನಿರಂತರ ಸೇವೆ ಮಾಡುತ್ತೇನೆ. ಎಲ್ಲರ ಜೊತೆಯಲ್ಲೂ, ಎಲ್ಲರ ಹಿತಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin