ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

V-Somanna--01

ಬೆಂಗಳೂರು, ಜು.20-ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂತು. ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಉಪಮಹಾಪೌರ ಎಂ.ಲಕ್ಷ್ಮಿನಾರಾಯಣ್, ಪಾಲಿಕೆ ಸದಸ್ಯ ಉಮೇಶ್‍ಶೆಟ್ಟಿ, ಮೋಹನ್‍ಕುಮಾರ್, ಮಾಜಿ ಸದಸ್ಯ ರವೀಂದ್ರ ಸೇರಿದಂತೆ ಮುಖಂಡರು, ಸೋಮಣ್ಣ ಅವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ವಿಜಯನಗರ, ಗೋವಿಂದರಾಜನಗರದಲ್ಲಿ ಇಂದು ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರೂ ಹುಟ್ಟುಹಬ್ಬದ ಶುಭಾಶಯಗಳ ಫ್ಲೆಕ್ಸ್‍ಗಳು, ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಇನ್ನು ಅಭಿಮಾನಿಗಳ ದಂಡೇ ಅವರ ನಿವಾಸದ ಎದುರು ಜಮಾಯಿಸಿ ನೆಚ್ಚಿನ ನಾಯಕನಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಗೋವಿಂದರಾಜನಗರ, ವಿಜಯನಗರದಲ್ಲಿ ಧೀಮಂತನಾಯಕರಾಗಿ, ಯುವಕರ ಆಶಾಕಿರಣದಂತಿರುವ ಇವರು ತಮ್ಮ ಅಧಿಕಾರಾವಧಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಂದ ಕ್ಷೇತ್ರದ ಏಳಿಗೆಗೆ ಶ್ರಮ ವಹಿಸಿದ್ದು, ಅಪಾರ ಜನಮನ್ನಣೇ ಗಳಿಸಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ, ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin