ಆಸ್ಟ್ರೇಲಿಯಾ ವಿರುದ್ದ ಹರ್ಮನ್‍ಪ್ರೀತ್‍ಕೌರ್ ಬ್ಯಾಟಿಂಗ್ ವೈಭವ, ಅಜೇಯ ಶತಕ

ಈ ಸುದ್ದಿಯನ್ನು ಶೇರ್ ಮಾಡಿ

Harmet--01

ನವದೆಹಲಿ,ಜು.21-ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ನಿನ್ನೆ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ದ ಸ್ಪೋಟಕ ಶತಕ ಸಿಡಿಸಿ ರಾತ್ರೋರಾತ್ರಿ ವಿಶ್ವಾದ್ಯಂತ ಪ್ರಸಿದ್ಧಿಯಾಗಿದ್ದು, ವಿಶ್ವದ ಹಿರಿಯ ಆಟಗಾರರು ಟ್ವಿಟರ್ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿಸಿದ್ದಾರೆ.  ಹಿರಿಯ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ , ರಹಾನೆ, ಧವನ್, ರೋಹಿತ್ ಶರ್ಮ ಸೇರಿದಂತೆ ಇಡೀ ಪುರುಷ ಕ್ರಿಕೆಟ್ ತಂಡದ ಆಟಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಾಲ್ಯದಲ್ಲೇ ವಾಲಿಬಾಲ್, ಬಾಸ್ಕೆಟ್‍ಬಾಲ್ ಆಟಗಾರ್ತಿಯಾಗಿದ್ದ ಪಂಜಾಬ್ ಮೂಲದ ಈ ಪೋರಿ ಕ್ರಿಕೆಟ್‍ನಲ್ಲಿ ಆಸಕ್ತಿ ಬೆಳೆಸಿಕೊಂಡು ರಾಜ್ಯಮಟ್ಟದ ಟೂರ್ನಿಮೆಂಟ್‍ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.   2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಹರ್ಮನ್ ಪ್ರೀತ್ ಕೌರ್, 2013ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿಯೂ ತಂಡವನ್ನು ಮುನ್ನೆಡೆಸಿದ್ದರು. ಅವರ ನಾಯಕತ್ವದಲ್ಲಿ ಭಾರತ ತಮಡ ಹಲವಾರು ಸರಣಿಯಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿತು. ಟಿ-20 ಸ್ಪೆಷಲಿಸ್ಟ್ ಆಗಿರುವ ಕೌರ್ ಪ್ರಸ್ತುತ ಸಿಡ್ನಿ ಥಂಡರ್ ತಂಡದ ಪರ ಆಡುತ್ತಿದ್ದಾರೆ.

ಪ್ರಸ್ತುತ ವಿಶ್ವಕಪ್‍ನಲ್ಲಿ ಭಾರತ ಫೈನಲ್ ತಲುಪಿದ್ದು , ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ 36 ರನ್‍ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್‍ಗೆ ಪ್ರವೇಶಿಸಿದೆ. ಚಾಂಪಿಯನ್‍ಪಟ್ಟದ ಹಣಾಹಣಿಯಲ್ಲಿ ಇಂಗ್ಲೆಂಡ್ ಸವಾಲನ್ನು ಭಾರತ ಎದುರಿಸಲಿದೆ.  ಆಸ್ಟ್ರೇಲಿಯಾ ವಿರುದ್ದ ಸೆಮಿಫೈನಲ್ ಪಂದ್ಯ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಹರ್ಮನ್ ಪ್ರೀತ್ ಕೌರ್ 115 ಎಸೆತಗಳಲ್ಲಿ 20 ಬೌಂಡ್ರಿ, 7 ಸಿಕ್ಸರ್ ಸಹಿತ 171 ರನ್ ಸಿಡಿಸಿ ಫೈನಲ್ ಪ್ರವೇಶಕ್ಕೆ ಕಾರಣರಾಗಿದ್ದಾರೆ.

ಆಸೀಸ್ ವಿರುದ್ದ ಅಭೂತಪೂರ್ವ ಶತಕ ಸಿಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಮನ್ ಕೌರ್, ವಿಶ್ವಕಪ್‍ನಲ್ಲಿ ನನಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ನಾನು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ನಿನ್ನೆ ನಡೆದ ಪಂದ್ಯ ನ ನ್ನ ಸಾಮಥ್ರ್ಯ ಪ್ರದರ್ಶಿಸಲು ಒಂದು ಅವಕಾಶವೇ ಆಗಿತ್ತು. ಮೈದಾನದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕದೆ ಚೆಂಡಿನ ತಿರುವು ಬಗ್ಗೆ ಗಮನಹರಿಸಿ ರನ್ ಶಿಖರವೇರಿಸಲು ಪ್ಲಾನ್ ಮಾಡಿಕೊಂಡಿದ್ದೆ ಎಂದಿದ್ದಾರೆ.  ಇದೇ 23ರಂದು ಇಂಗ್ಲೆಂಡ್ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಭಾರತ ಸೆಣಸಲಿದ್ದು , ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕೌರ್ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಪಂದ್ಯವನ್ನು ಎದುರು ನೋಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin