ಕಿರಣ್ ಬೇಡಿ ಹಿಟ್ಲರ್ ಇದ್ದಂತೆ ಎಂದು ಪೋಸ್ಟರ್ ಹಂಚಿದ ಕಾಂಗ್ರೆಸ್

Kiran-Bedi

ಪುದುಚೇರಿ,ಜು.21- ಪುದುಚೇರಿಯ ಆಡಳಿತಾರೂಢ ಕಾಂಗ್ರೆಸ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಕಾಂಗ್ರೆಸ್ ಕಿರಣ್ ಬೇಡಿ ಅವರನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹಾಗೂ ಕಾಳಿದೇವಿಗೆ ಹೋಲಿಸಿ ಪೋಸ್ಟರ್ ಹರಿಬಿಟ್ಟಿದೆ. ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಇತ್ತೀಚೆಗೆ ಬಿಜೆಪಿಯ ಮೂವರು ಸದಸ್ಯರನ್ನು ನಾಮ ನಿರ್ದೇಶಿಸಿತ ಶಾಸಕರನ್ನಾಗಿ ನೇಮಕ ಮಾಡಿದ್ದರು. ಬಿಜೆಪಿ ಸದಸ್ಯರನ್ನು ವಿಧಾನಸಭೆಗೆ ಆಯ್ಕೆ ಮಾಡುವಾಗ ಸ್ಥಳೀಯ ಸರ್ಕಾರವನ್ನು ಕಿರಣ್ ಬೇಡಿ ಸಂಪರ್ಕಿಸಿಲ್ಲ ಎಂಬುದು ಆಡಳಿತಾರೂಢ ಕಾಂಗ್ರೆಸ್ ಆರೋಪ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಇದರ ಮುಂದುವರಿದ ಭಾಗವೆಂಬಂತೆ ಕಾಂಗ್ರೆಸ್ ಕಾರ್ಯಕರ್ತರು, ಕಿರಣ್ ಬೇಡಿ ಅವರನ್ನು ಅಡಾಲ್ಫ್ ಹಿಟ್ಲರ್ ಹಾಗೂ ಕಾಳಿ ದೇವಿಗೆ ಹೋಲಿಸಿ ತರಹೇವಾರಿ ಪೋಸ್ಟರ್‍ಗಳನ್ನು ಹರಿಬಿಟ್ಟಿದ್ದಾರೆ. ಕಾಂಗ್ರೆಸ್‍ನ ಈ ಪೋಸ್ಟರ್‍ಗಳನ್ನು ಸ್ವತಃ ಕಿರಣï ಬೇಡಿಯವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, ಎಮೋಜಿ ಮೂಲಕ ನಮಸ್ಕರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin