ಭಾರತ-ಚೀನಾ ಬಿಕ್ಕಟ್ಟು : ಎಚ್ಚರಿಕೆಯಿಂದ ಗಮನಿಸುತ್ತಿದೆ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

India-vs-China

ವಾಷಿಂಗ್ಟನ್, ಜು.21-ಭಾರತ ಮತ್ತು ಚೀನಾ ನಡುವೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಬಣವಾಗಿರುವ ಬಿಕ್ಕಟ್ಟನ್ನು ಅಮೆರಿಕ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ. ಉದ್ವಿಗ್ನತೆ ಉಪಶಮನಕ್ಕಾಗಿ ಏಷ್ಯಾದ ಎರಡು ಬಲಿಷ್ಠ ದೇಶಗಳು ನೇರ ಮಾತುಕತೆಯಲ್ಲಿ ತೊಡಗುವಂತೆಯೂ ಅಮೆರಿಕ ಒತ್ತಾಯಿಸಿದೆ.  ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಮ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಭಾರತ-ಚೀನಾ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಅಮೆರಿಕ ಗಂಭೀರವಾಗಿ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದೆ.

ಈ ಬಿಕ್ಕಟ್ಟಿಗೆ ಮಾತುಕತೆಯೇ ಸೂಕ್ತ ಮಾರ್ಗ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನೌವೆರ್ಟ್ ವಾಷಿಂಗ್ಟನ್‍ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಉಭಯ ದೇಶಗಳ ಪರಸ್ಪರ ನೇರ ಮಾತುಕತೆಯಿಂದ ಈ ಬಿಕ್ಕಟ್ಟನ್ನು ಉಪಶಮನಗೊಳಿಸಬೇಕು ಎಂಬುದು ಟ್ರಂಪ್ ಆಡಳಿತದ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ಭಾರತ-ಚೀನಾ ಚರ್ಚೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಎರಡು ದೇಶಗಳ ನಡುವೆ ಮಾತುಕತೆಗೆ ಅವಕಾಶ ಲಭಿಸಿದೆ ಎಂದು ಅವರು ಬೀಜಿಂಗ್‍ನಲ್ಲಿ ಜುಲೈ 27-28ರಂದು ನಡೆಯುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ದೇಶಗಳ ಎನ್‍ಎಸ್‍ಎ ಸಮಾವೇಶದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿಲ್ ಕೆ. ದೋವೆಲ್ ಭೇಟಿ ನೀಡಲಿರುವ ವಿಷಯವನ್ನು ಉಲ್ಲೇಖಿಸಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin