ಮುಂದಿನ ಚುನಾವಣೆಗಳಲ್ಲಿ ಇಂಕ್ ಬದಲಿಗೆ ಮಾರ್ಕರ್ ಪೆನ್ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

Voting-Ink--01

ಮೈಸೂರು,ಜು.21-ಮುಂಬರುವ ಚುನಾವಣೆಗಳಲ್ಲಿ ಮತದಾರರ ಕೈ ಬೆರಳಿಗೆ ಇಂಕ್ ಹಾಕುವ ಬದಲು ಮಾರ್ಕರ್ ಪೆನ್‍ನಲ್ಲಿ ಗುರುತು ಮಾಡಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸ ಚಾರಿ ಇಂದಿಲ್ಲಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ನಗರದ ಬಣ್ಣ ಮತ್ತು ಅರಗು ಕಾರ್ಖಾನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಚುನಾವಣೆಗಳಲ್ಲಿ ಮತದಾನ ಮಾಡಿದವರ ಬೆರಳಿಗೆ ಇಂಕ್ ಹಾಕಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಮಾರ್ಕರ್ ಪೆನ್‍ಗಳ ಮೂಲಕ ಗುರುತು ಹಾಕಲಾಗುವುದು ಎಂದರು.

ಒಂದು ಮಾರ್ಕರ್ ಪೆನ್‍ನಲ್ಲಿ ಒಂದು ಸಾವಿರ ಮಂದಿಗೆ ಗುರುತು ಹಾಕಬಹುದಾಗಿದೆ. ಈ ಹಿನ್ನೆಲೆಯಲ್ಲಿ ತಾವು ಇಂದು ಈ ಕಾರ್ಖಾನೆಗೆ ಭೇಟಿ ಮಾಡಿದ್ದು , ಇದರ ಸಾಧಕ-ಬಾಧಕಗಳ ಪರಾಮರ್ಶಿಸುವುದಾಗಿ ತಿಳಿಸಿದರು.  ರಾಜ್ಯಾದ್ಯಂತ 55 ಸಾವಿರ ಮತಗಟ್ಟೆಗಳನ್ನು ಚುನಾವಣಾ ಸಂದರ್ಭದಲ್ಲಿ ತೆರೆಯಲಾಗುತ್ತದೆ. ಅಲ್ಲಿ ಮತದಾರರ ಕೈ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಮಾರ್ಕರ್ ಪೆನ್ ಮೂಲಕ ಮತದಾರನ ಕೈ ಬೆರಳಿಗೆ ಗುರುತು ಮಾಡಲಾಗುತ್ತದೆ ಎಂದು ಹೇಳಿದರು.

2018ರಿಂದ ನಡೆಯಲಿರುವ ಚುನಾವಣೆಗಳಿಗೆ ಶಾಯಿ ಬದಲು ಮಾರ್ಕರ್ ಪೆನ್ ಬಳಸಲಾಗುವುದು ಎಂದು ಚುನಾವಣಾ ಆಯುಕ್ತ ಶ್ರೀನಿವಾಸಚಾರಿ ಸ್ಪಷ್ಟಪಡಿಸಿದರು.  ಈ ಸಂದರ್ಭದಲ್ಲಿ ಬಣ್ಣ ಮತ್ತು ಅರಗು ಕಂಪನಿಯ ಅಧ್ಯಕ್ಷ ವೆಂಕಟೇಶ್ , ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin