‘ಸಿದ್ದರಾಮಯ್ಯನಂತ ಭ್ರಷ್ಟ, ಕೋಮುವಾದಿ ಮತ್ತೊಬ್ಬರಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Ayanuru-Manjunath--01

ತಿಪಟೂರು, ಜು.21- ಮುಖ್ಯಮಂತ್ರಿ ಸಿದ್ದರಾಮಯ್ಯನಂತ ಭ್ರಷ್ಟ, ಕೋಮುವಾದಿ ಮತ್ತೊಬ್ಬರಿಲ್ಲ ಎಂದು ರಾಜ್ಯಸಭಾ ಸದಸ್ಯ ಅಯನೂರು ಮಂಜುನಾಥ್ ಹರಿಹಾಯ್ದರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನಿಷ್ಟಾವಂತ ಅಧಿಕಾರಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ರಾಜ್ಯದ ಜನರನ್ನು ಜಾತಿ ಲೆಕ್ಕಾಚಾರದಲ್ಲಿಯೇ ವೋಟ್ ಬ್ಯಾಂಕ್ ಸ್ಥಾಪಿಸುವ ಸಲುವಾಗಿ ಕೆಲ ಜಾತಿಗಳಿಗೆ ಮಾತ್ರ ಹೆಚ್ಚಿನ ಸೌಕರ್ಯಗಳನ್ನು ನಿಡುತ್ತಾ ಓಲೈಕೆಯನ್ನು ಮಾಡಲು ಮುಂದಾಗುತ್ತಿದ್ದಾರೆ ಎಂದರು.

ಭಾ.ಜ.ಪದಿಂದ ದೀನದಯಾಳ ಉಪಾಧ್ಯಯ ಜನ್ಮಶತಾಬ್ದಿ ಅಂಗವಾಗಿ ಮಹಾಸಂಪರ್ಕ ಅಭಿಯಾನ ಪ್ರಾರಂಭಿಸಿದ್ದು ಮನೆ-ಮನೆಗಳಿಗೆ ಕಾರ್ಯಕರ್ತರುಗಳು ತೆರಳಿ ಕೇಂದ್ರದ ಮೋದಿಜಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಹಿಂದಿನ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಾಧನೆಗಳ ಬಗ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆಯನ್ನು ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕರ್ ರವಿ, ಹಿಂದುಳಿದ ವರ್ಗದ ಉಪಾಧ್ಯಕ್ಷ ರುದ್ರೇಶ್, ಮಾದಿಹಳ್ಳಿ ಪ್ರಕಾಶ್, ಮಹಾಸಂಪರ್ಕ ಅಭಿಯಾನ ತಾಲ್ಲೂಕು ವಿಸ್ತಾರಕ ಮೈಲನಹಳ್ಳಿ ರಾಜಶೇಖರ್, ನಗರಾಧ್ಯಕ್ಷ ಲೋಕೇಶ್, ತಾಲ್ಲೂಕು ಅಧ್ಯಕ್ಷ ದಿವಾಕರ್, ನಗರಸಭಾ ಸದಸ್ಯ ರಾಮ್ ಮೋಹನ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin