ಹುಷಾರ್, ರೈಲಿನಲ್ಲಿ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ .!

ಈ ಸುದ್ದಿಯನ್ನು ಶೇರ್ ಮಾಡಿ

Train-Food--01

ನವದೆಹಲಿ,ಜು.21-ಮಹತ್ವದ ಬೆಳವಣಿಗೆಯೊಂದರಲ್ಲಿ ಆತಂಕಕಾರಿ ವರದಿ ಹೊರಬಿದ್ದಿದೆ. ರೈಲ್ವೆ ಪ್ರಯಾಣಿಕರಿಗೆ ನೀಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾದುದಲ್ಲವಂತೆ.!!  ಹೌದು, ರೈಲಿನಲ್ಲಿ ಪ್ರಯಾಣಿಕರಿಗೆ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ. ಕಲುಷಿತ ಆಹಾರ, ರಿಸೈಕಲ್  ಮಾಡಿದ ಆಹಾರ ಅಂದ್ರೆ ಹಳಿಸಿ ಆಹಾರವನ್ನು ಮತ್ತೆ ಬಿಸಿ ಮಾಡಿ ಕೊಡಲಾಗುತ್ತಿದೆ. ಅಲ್ಲದೇ, ದಿನಾಂಕ ಮುಗಿದ ಬಾಟಲಿ ಅಥವಾ ಡಬ್ಬದಲ್ಲಿ ತುಂಬಿಟ್ಟ ಆಹಾರವನ್ನು ರೈಲ್ವೆ ಪ್ರಯಾಣಿಕರಿಗೆ ನೀಡಲಾಗುತ್ತಿದೆ.

ಜೊತೆಗೆ ಅನಧಿಕೃತ ಬ್ರ್ಯಾಂಡ್‍ಗಳ ನಿರಿನ ಬಾಟಲಿಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮಹಾಲೆಖಪಾಲರ ಆಡಿಟ್ (ಸಿಎಜಿ) ವರದಿ ಹೇಳಿದೆ. ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.   ಸಿಎಜಿ ತಂಡ ಹಾಗೂ ರೈಲ್ವೆ ಇಲಾಖೆ ಜಂಟಿ ತಪಾಸಣೆ ನಡೆಸಿ ಈ ವರದಿಯನ್ನು ನೀಡಲಾಗಿದೆ. ಆಯ್ದ 74 ರೈಲ್ವೆ ನಿಲ್ದಾಣಗಳು ಹಾಗೂ 80 ರೈಲುಗಳಲ್ಲಿ ಆಹಾರವನ್ನು ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.

ರೈಲ್ವೆ ಆಹಾರ ನೀತಿಯಲ್ಲಿ ಪದೇ ಪದೇ ಬದಲಾವಣೆಯಿಂದಲೇ ಸಾಕಷ್ಟು ಸಮಸ್ಯೆಯಾಗುತ್ತದೆ. ರೈಲ್ವೆ ಆಹಾರ ನೀತಿ ಪ್ರಯಾಣಿಕರಿಗೆ ಸದಾ ಪ್ರಶ್ನೆಯಾಗಿಯೇ ಇರುತ್ತದೆ. ಆಹಾರ ತಯಾರಿಸುವ ವೇಳೆ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ರೈಲ್ವೆ ಇಲಾಖೆಯ ಶುಚಿತ್ವ ನೀತಿ ಉಲ್ಲಂಘನೆಯಾಗುತ್ತಿದೆ ಎಂದು ವದರಿಯಲ್ಲಿ ಉಲ್ಲೇಖಿಸಲಾಗಿದೆ.

ಆಹಾರವನ್ನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಜೊತೆಗೆ ಪ್ರಯಾಣಿಕರು ಆಹಾರ ಪಡೆದ ನಂತರ ಅವರಿಗೆ ಬಿಲï ಕೂಡ ನೀಡಲಾಗುತ್ತಿಲ್ಲ. ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕೀಟ, ಇಲಿ, ಜಿರಳೆಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವರದಿ ಹೇಳಿದೆ. ಅಲ್ಲದೇ, ಬೆಂಕಿ ಅವಘಡಗಳ ಬಗ್ಗೆಯೂ ಸಿಎಜಿ ವರದಿ ಬೆಳಕು ಚೆಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin