14ನೇ ರಾಷ್ಟ್ರಪತಿ ಕೋವಿಂದ್‍ಗೆ ಅಮೆರಿಕ ಅಭಿನಂದನೆ, ಉತ್ತಮ ಸಹಕಾರದ ನಿರೀಕ್ಷೆ

Kovind--01

ವಾಷಿಂಗ್ಟನ್, ಜು.21-ಭಾರತದ 14ನೇ ರಾಷ್ಟ್ರಪತಿಯಾಗಿ ಚುನಾಯಿತವಾಗಿರುವ ರಾಮನಾಥ್ ಕೋವಿಂದ್ ಅವರನ್ನು ಅಮೆರಿಕ ಅಭಿನಂದಿಸಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸಲು ತಾನು ಉತ್ಸುಕವಾಗಿರುವುದಾಗಿ ವಾಷಿಂಗ್ಟನ್ ಹೇಳಿದೆ.
ನಾವು ನೂತನ ಅಧ್ಯಕ್ಷ ಕೋವಿಂದ್ ಅವರನ್ನು ಅಭಿನಂದಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನೌವೆರ್ಟ್ ಹೇಳಿದ್ದಾರೆ.
ಅಮೆರಿಕ ಮತ್ತು ಭಾರತದ ಸಂಬಂಧ ಬಹು ಆಳವಾಗಿ ಬೆಳೆಯುತ್ತಿದ್ದು, ಅನೇಕ ವಿಷಯಗಳಲ್ಲಿ ಮಹತ್ವದ ಪಾಲುದಾರಿಕೆ ಬಾಂಧವ್ಯ ವೃದ್ದಿಯಾಗಿದೆ. ಅದೇ ರೀತಿ ಕೋವಿಂದ್ ಅವರೊಂದಿಗೂ ನಾವು ಉತ್ತಮ ಸಹಕಾರ ಹೊಂದಲು ಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin