1500 ರೂ. ಡೆಪಾಸಿಟ್ ಮಾಡಿದರೆ ಜಿಯೋ ಗ್ರಾಹಕರಿಗೆ ಉಚಿತ ಸ್ಮಾರ್ಟ್‍ಫೋನ್..!

Jio--01

ಮುಂಬೈ,ಜು.21-ಟೆಲಿಫೋನ್ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿ ಸೃಷ್ಟಿಸಿರುವ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿದೆ. ಜಿಯೋ ಸಿಮ್ ಹೊಂದಿರುವ ಗ್ರಾಹಕರಿಗೆ ಉಚಿತ ಕೈಗೆಟುಕುವ 500 ರೂ.ಗೆ ಸ್ಮಾರ್ಟ್‍ಫೋನ್‍ಗಳನ್ನು ನೀಡಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಣೆ ಮಾಡಿದ್ದಾರೆ.    ಖಾಸಗಿ ಹೋಟೆಲ್‍ನಲ್ಲಿ ನಡೆದ 40ನೇ ವರ್ಷದ ಕಂಪನಿಯ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ತಿಳಿಸಿರುವ ಮುಖ್ಯಸ್ಥ ಅಂಬಾನಿ, ಜಿಯೋ ಗ್ರಾಹಕರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ಘೋಷಣೆ ಮಾಡಿದ್ದು , ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಹಕರಿಗೆ ಫೋನ್ ಸಿಗಲಿದೆ. ಆ.24ರಿಂದ ಈ ಬಗ್ಗೆ ಬುಕ್ಕಿಂಗ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ದೇಶದ 70ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಈ ಬಂಪರ್ ಕೊಡುಗೆ ನೀಡಲಾಗುತ್ತಿದ್ದು , ಗ್ರಾಹಕರು 1500 ರೂ. ಡೆಪಾಸಿಟ್ ಮಾಡಿದರೆ ಉಚಿತ ಜಿಯೋ ಫೋನ್ ಲಭ್ಯವಿದೆ. ಮೂರು ವರ್ಷದ ಬಳಿಕ ಠೇವಣಿಯಲ್ಲಿಟ್ಟದ್ದ ಹಣವೂ ವಾಪಸ್ ಸಿಗಲಿದೆ ಎಂದು ಹೇಳಿದ್ದಾರೆ.   ತಿಂಗಳಿಗೆ ಕೇವಲ 153 ರೂ. ಅನ್‍ಲಿಮಿಟೆಡ್ ಡಾಟಾ, ಉಚಿತ ಕರೆಗಳು, 309 ರೂ.ಗೆ ಕೇಬಲ್ ಟಿವಿ ಸೌಲಭ್ಯ ಸೇರಿದಂತೆ ನಾನಾ ಸೌಲಭ್ಯಗಳು ಜಿಯೋ ಗ್ರಾಹಕರಿಗೆ ಸಿಗಲಿವೆ. ಗ್ರಾಹಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಂಬಾನಿ ತಿಳಿಸಿದ್ದಾರೆ.

4 ದಶಕಗಳ ಹಿಂದೆ ಭಾರತದಲ್ಲಿ ಸಣ್ಣದಾಗಿ ಹುಟ್ಟಿದ ರಿಲಯನ್ಸ್ ಇಂಡಸ್ಟ್ರೀಸ್ ಲಿ., ಇಂದು ಬೃಹದಾಕಾರವಾಗಿ ಬೆಳೆದಿದೆ. 1977ರಲ್ಲಿ 70 ಕೋಟಿ ರೂ. ಬಂಡವಾಳದಿಂದ ಆರಂಭಿಸಿದ ಕಂಪನಿ ಮೂರು ಲಕ್ಷ 73 ಸಾವಿರ ಕೋಟಿ ರೂ. ಲಾಭ ಗಳಿಸಿದೆ. 33 ಕೋಟಿ ಆಸ್ತಿಯಿಂದ 7 ಲಕ್ಷ ಕೋಟಿ ಆಸ್ತಿ ಗಳಿಸಿದೆ. ಇಂಥ ಸಾಧನೆ ವಿಶ್ವದಲ್ಲಿ ಯಾವುದೇ ಕಂಪನಿ ಮಾಡಿಲ್ಲ ಎಂದು ಪ್ರಶಂಸಿಸಿದರು.

 ಉಚಿತ ಬೋನಸ್ ಷೇರು: ತನ್ನ ಕಂಪನಿಯಲ್ಲಿ ಷೇರು ಹೊಂದಿರುವ ಗ್ರಾಹಕರಿಗೆ ಉಚಿತ ಬೋನಸ್ ಷೇರು ಸಿಗಲಿದೆ. ತಲಾ ಒಂದು ಷೇರಿಗೆ ಒಂದು ಬೋನಸ್ ಸಿಗಲಿದೆ ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin