3 ವರ್ಷಗಳಲ್ಲಿ 49 ರಾಷ್ಟ್ರಗಳಿಗೆ ಭೇಟಿಕೊಟ್ಟ ಪ್ರಧಾನಿ ಮೋದಿ

Modi--Visit

ನವದೆಹಲಿ,ಜು.21-ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸ ಕುರಿತು ಹಲವಾರು ಪರ-ವಿರೋಧ ಚರ್ಚೆ, ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೂರು ವರ್ಷಗಳಲ್ಲಿ ಮೋದಿಯವರು 49 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮೋದಿಯವರ ವಿದೇಶ ಪ್ರವಾಸ ಕುರಿತಂತೆ ರಾಜ್ಯಸಭೆಯಲ್ಲಿ ಎತ್ತಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲï ವಿ.ಕೆ. ಸಿಂಗ್ ಅವರು, 2014ರ ಮೊದಲ ದ್ವಿತೀಯಾರ್ಧದಲ್ಲಿ ಪ್ರಧಾನಿ 8 ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದಾರೆ.

ಅವರು ಮೊದಲು ಭೇಟಿ ಕೊಟ್ಟಿದ್ದು, ಮೊದಲು ಭೇಟಿ ಕೊಟ್ಟಿದ್ದು ಭೂತಾನ್ ಆಗಿದ್ದು, ಪ್ರಸಕ್ತ ವರ್ಷದ 7 ತಿಂಗಳಲ್ಲಿ ಒಟ್ಟು 10 ದೇಶಗಳಿಗೆ ಮೋದಿ ಭೇಟಿ ನೀಡಿದ್ದಾರೆಂದು ಹೇಳಿದ್ದಾರೆ.  ಕಳೆದ ಮೂರು ವರ್ಷಗಳಲ್ಲಿ 49 ರಾಷ್ಟ್ರಗಳಿಗೆ ಭೇಟಿ ನೀಡಿರುವ ಮೋದಿಯವರು ಭೇಟಿ ವೇಳೆ ಹಲವು ವಿವಿಧ ದೇಶಗಳ ಮುಖಂಡರ ಜೊತೆ ಮಹತ್ವದ ಚರ್ಚೆ, ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin