ಅಭಯ್‍ಚಂದ್ರ ಜೈನ್ ವಿರುದ್ದ ಪೊಲೀಸರಿಗೆ ದೂರು ನೀಡಿದ ವೃದ್ದೆ

Abhaya-Chnadra-Jain--201

ಮಂಗಳೂರು,ಜು.22- ಕಾರು ಡಿಕ್ಕಿ ಹೊಡಿಸಿ ಏಕವಚನದಲ್ಲಿ ನಿಂದಿಸಿದ ಆರೋಪ ಪ್ರಕರಣ ಸಂಬಂಧ ಮೂಡಬಿದ್ರೆ ಶಾಸಕ ಅಭಯ್ ಚಂದ್ರ ಜೈನ್ ವಿರುದ್ದ ವೃದ್ದೆ ಜೈನಬರಣಿ ಎಂಬುವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಿಲ್ಲೆಯ ಕನ್ನಿಪಿರುವಿನಲ್ಲಿ ನಿನ್ನೆ ಸಂಜೆ ವೃದ್ಧೆ ಜೈನಬರಣಿ ಎಂಬುವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಭಯ್ ಚಂದ್ರ ಜೈನ್ ಅವರ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ವೃದ್ದೆಯನ್ನು ಆಸ್ಪತ್ರೆ ಸೇರಿಸುವ ಬದಲು ದರ್ಪ ತೋರಿದ್ದಾನೆ. ಕಾರಿನಲ್ಲಿ ಅಭಯ್ ಚಂದ್ರ ಜೈನ್ ಕೂಡ ಕೂತಿದ್ದರು. ಹೀಗಾಗಿ ವೃದ್ದೆ ಅವರು ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin