ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-07-2017)

ನಿತ್ಯ ನೀತಿ : ಮನುಷ್ಯನು ಮೇರು ಪರ್ವತದಂತೆ ದೊಡ್ಡವನಾಗಿ ರಲಿ, ಪ್ರಾಜ್ಞನಾಗಿರಲಿ, ಶೂರನಾಗಿರಲಿ, ಸ್ಥಿರ ಬುದ್ಧಿ ಯವನಾಗಿರಲಿ- ಆಸೆಯೆಂಬುದೊಂದು ಒಂದು ನಿಮಿಷದಲ್ಲಿ ಅವನನ್ನು ಹುಲ್ಲುಕಡ್ಡಿಗೆ ಸಮನನ್ನಾಗಿ ಮಾಡಿಬಿಡುತ್ತದೆ. – ಯೋಗ ವಾಸಿಷ್ಠ, ವೈರಾಗ್ಯ

Rashi

ಪಂಚಾಗ : ಶನಿವಾರ , 22.07.2017

ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಅಸ್ತ ಮ.05.50 / ಚಂದ್ರ ಉದಯ ರಾ.05.44
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ಸಾ.06.28) / ನಕ್ಷತ್ರ: ಆರಿದ್ರಾ (ಮ.12.19)
ಯೋಗ: ವ್ಯಾಘಾ-ಹರ್ಷ (ಬೆ.08.57-ರಾ.05.10)
ಕರಣ: ಭದ್ರೆ-ಶಕುನಿ-ಚತುಷ್ಪಾದ (ಬೆ.08.08-ಸಾ.06.28-ರಾ.04.50)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 07


ರಾಶಿ ಭವಿಷ್ಯ :

ಮೇಷ : ವೈಯಕ್ತಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದರಿಂದ ಘನತೆ ಹೆಚ್ಚಲಿದೆ
ವೃಷಭ : ಬಂಧು ಸತ್ಕಾರಕ್ಕೆ ಅಧಿಕ ವೆಚ್ಚ ತಗುಲಲಿದೆ
ಮಿಥುನ: ದೂರ ಪ್ರವಾಸದಿಂದ ಪ್ರಯಾಸ ಪಡುವ ಸಂಭವವಿದ್ದು, ಪ್ರವಾಸದ ಮೊಟಕು ಉತ್ತಮ
ಕಟಕ : ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ
ಸಿಂಹ: ಬರಹಗಾರರಿಗೆ ಬದಲಾವಣೆಯಿಂದ ದ್ರವ್ಯಾ ನುಕೂಲತೆ ಲಭ್ಯವಾಗಲಿದೆ
ಕನ್ಯಾ: ಹಿರಿಯರ ಸಂಕಷ್ಟ ದಿಂದ ತುರ್ತು ಕಾರ್ಯಗಳನ್ನು ಮುಂದೂಡುವ ಸಾಧ್ಯತೆ ಇದೆ

ತುಲಾ: ದೇವಿ ಆರಾಧನೆ ಯಿಂದ ನೆಮ್ಮದಿ ಸಿಗಲಿದೆ
ವೃಶ್ಚಿಕ : ಗುರುಗಳ ಆರಾಧನೆ ಯಿಂದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಿರಿ, ಉತ್ತಮ ದಿನ
ಧನುಸ್ಸು: ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ, ಧನಾಗಮನದಲ್ಲಿ ಏರುಪೇರು
ಮಕರ: ಸಾಮಾಜಿಕ ಬದುಕು ಕೊಂಚ ದುಸ್ತರವೆನಿಸಲಿದೆ
ಕುಂಭ: ಕ್ಲಿಷ್ಟಕರ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ
ಮೀನ: ಬಂಧುಗಳು ನಿಮ್ಮನ್ನು ಪ್ರಶಂಸಿಸುವರು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin