ಇಂದಿರಾ ಕ್ಯಾಂಟೀನ್ ಅವ್ಯವಹಾರ : ಬಿಬಿಎಂಪಿ ಆಯುಕ್ತರಿಗೆ ಮರುಸವಾಲು

Indira-Canteen--01

ಬೆಂಗಳೂರು, ಜು.22-ಇಂದಿರಾ ಕ್ಯಾಂಟೀನ್ ನಿರ್ಮಾಣದಲ್ಲಿ ಯಾವುದೆ ಅವ್ಯವಹಾರವಾಗಿಲ್ಲ ಎಂದು ಸವಾಲು ಹಾಕಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಬಿಜೆಪಿ ಮರುಸವಾಲು ಹಾಕಿದೆ.   ಇಂದಿರಾ ಕ್ಯಾಂಟೀನ್ ನಿರ್ಮಾಣ ಕುರಿತಂತೆ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ್ ಪ್ರಸಾದ್ ಅವರು, ಯಾವುದೇ ಅವ್ಯವಹಾರ ನಡೆದಿಲ್ಲ. ತಪ್ಪು ಮಾಡಿದ್ದರೆ ಅದನ್ನು ಸಾಬೀತುಪಡಿಸಿ ತೋರಿಸಲಿ ಎಂದು ಸವಾಲು ಹಾಕಿದ್ದರು.

ಈ ಸವಾಲನ್ನು ಸ್ವೀಕರಿಸಿರುವ ಎನ್.ಆರ್.ರಮೇಶ್, ಈ ಕುರಿತಂತೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ದಾಖಲೆಗಳ ಸಹಿತ ಚರ್ಚೆಗೆ ಬರುತ್ತೇನೆ. ನೀವು ಚರ್ಚೆಯಲ್ಲಿ ಪಾಲ್ಗೊಳ್ಳುವಿರಾ? ಎಂದು ಆಯುಕ್ತರಿಗೆ ಮರುಸವಾಲು ಹಾಕಿದ್ದಾರೆ.  ಒಂಭತ್ತು ಚದುರ ವಿಸ್ತೀರ್ಣದ ಇಂದಿರಾ ಕ್ಯಾಂಟೀನ್ ನಿರ್ಮಾಣದ ಹೊಣೆಯನ್ನು ತಮಿಳುನಾಡಿನ ಕೆಇಎಫ್ ಸಂಸ್ಥೆಗೆ ನೀಡಿದ್ದೀರಾ. ಪ್ರತಿ ಕ್ಯಾಂಟೀನ್ ನಿರ್ಮಾಣಕ್ಕೆ 28.05 ಲಕ್ಷ ದರ ನಿಗದಿಪಡಿಸಿದ್ದೀರಾ.

ಕೆಇಎಫ್ ಸಂಸ್ಥೆ ನಿರ್ಮಿಸುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಕ್ಯಾಂಟೀನ್‍ನನ್ನು ಕೇವಲ 9.90 ಲಕ್ಷದಲ್ಲಿ ನಿರ್ಮಿಸಿಕೊಡಲು ರಾಜ್ಯದ ಹಲವಾರು ಸಂಸ್ಥೆಗಳು ಸಿದ್ದವಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ನೀವು ಒಪ್ಪಿಕೊಂಡಿದ್ದೇ ಆದಲ್ಲಿ ಕೇವಲ 10 ಲಕ್ಷ ರೂ. ವೆಚ್ಚದಲ್ಲಿ ನಾನು ನಿರ್ಮಿಸಿಕೊಡುತ್ತೇನೆ. ಆ ಕಟ್ಟಡ ನಿರ್ಮಾಣಕ್ಕೆ ನಿಮ್ಮ ಅಮೃತಹಸ್ತದಿಂದಲೇ ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin