ಕೋಳಿ ಮಾಂಸದ ಜೊತೆ ಸಾಗಿಸುತ್ತಿದ್ದ 67 ಕೆಜಿ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Drug

ರಿಯಾದ್, ಜು.22-ಕೋಳಿಮಾಂಸ ಪೊಟ್ಟಣಗಳೊಂದಿಗೆ ಮಾದಕವಸ್ತು ಕಳ್ಳಸಾಗಣೆ ಮಾಡುವ ವ್ಯವಸ್ಥಿತ ಜಾಲವೊಂದನ್ನು ಸೌದಿ ಅರೇಬಿಯಾ ಪೊಲೀಸರು ಭೇದಿಸಿದ್ದಾರೆ. ರಿಯಾದ್‍ಗೆ ಬಂದ ಕಂಟೈನರ್‍ನಲ್ಲಿ ಘನೀಕೃತ (ಪ್ರೋಜೋನ್) ಚಿಕನ್ ಪ್ಯಾಕೆಟ್‍ಗಳ ನಡುವೆ 67 ಕೆಜಿ ಕೊಕೈನ್ ಪೊಟ್ಟಣಗಳು ಪತ್ತೆಯಾಗಿವೆ.
ದೇಶದ ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದ ಡ್ರಗ್ಸ್‍ನನ್ನು ರಿಯಾದ್ ಕಿಂಗ್ ಅಬ್ದುಲ್ಲಾ ಎಕಾನಾಮಿಕ್ ಸಿಟಿಯ ಕಸ್ಟಮ್ಸ್ ಪೋರ್ಟ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. (ಕೋಲ್ಡ್ ಸ್ಟೋರೇಜ್) ಶೈತ್ಯ ಸಂಗ್ರಹ ಕಂಟೈನರ್‍ನಲ್ಲಿ ಮಾಂಸದ ಮಧ್ಯೆ ಕೊಕೈನ್ ಪ್ಯಾಕೆಟ್‍ಗಳನ್ನು ಅಡಗಿಸಿ ಇಡಲಾಗಿತ್ತು.

ಮಾಂಸ ಪ್ಯಾಕೆಟ್‍ನ ಆಕಾರ ಮತ್ತು ಅಳತೆಯಲ್ಲಿ ಡ್ರಗ್ಸ್ ಪೊಟ್ಟಣಗಳು ಇದ್ದವು. ಇದರಿಂದ ಕೊಕೈನ್‍ನನ್ನು ಪತ್ತೆ ಮಾಡುವುದು ಸುಲಭವಾಗಿರಲಿಲ್ಲ. ಆದರೆ ಸೀಮಾಸುಂಕ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದಾಗ ಕಳ್ಳಸಾಗಣೆಯ ಹೊಸ ತಂತ್ರ ಪತ್ತೆಯಾಯಿತು. ಆರೋಪಿಗಳನ್ನು ಬಂಧಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ಡ್ರಗ್ಸ್ ಕಳ್ಳಸಾಗಣೆ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಖದೀಮರು ಹೊಸ ಹೊಸ ಕುತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ದೇಶಕ್ಕೆ ನಿಷೇಧಿತ ವಸ್ತುಗಳ ಕಳ್ಳಸಾಗಣೆಗೆ ನಡೆಸುವ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು. ಇದಕ್ಕಾಗಿ ಭೂ, ವಾಯು ಮತ್ತು ವಾಯು ಮಾರ್ಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಸ್ಟಮ್ಸ್ ಮಹಾ ನಿರ್ದೇಶಕ ಮಹಮದ್ ಅಲ್‍ಮೇಹ್ದಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin