ಕ್ರಿಕೆಟರ್ ಪರ್ವೀಂದರ್ ಅವಾನಾ ಮೇಲೆ ಹಲ್ಲೆ

Parvindar-Awana--01

ಗ್ರೇಟ್  ನೋಯ್ಡಾ,ಜು.22- ಭಾರತೀಯ ಕ್ರಿಕೆಟಿಗ ದೆಹಲಿ ವೇಗದ ಬೌಲರ್ ಪರ್ವೀಂದರ್ ಅವಾನಾ ಮೇಲೆ ಐವರು ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಹರಿದ್ವಾರದ ಮನೆಯಿಂದ ಕಾಸ್ನಾ ಸೈಟ್ -4 ಗೆ ಮರಳುತ್ತಿರುವ ವೇಳೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಪರ್ವೀಂದರ್ ಅವರ ಎಕ್ಸ ಯುವಿ ಕಾರು ಈ ದಾಳಿಯಿಂದ ಹಾನಿಗೊಳಗಾಗಿದೆ. ಹಲ್ಲೆ ನಡೆಸಿದವರು ಗಂಗೋಳ ಗ್ರಾಮದವರು ಎಂದು ಹೇಳಲಾಗಿದೆ. ಯಾವ ಕಾರಣಕ್ಕಾಗಿ ಅವರ ಮೇಲೆ ದಾಳಿ ನಡೆಸಲಾಗಿದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

2012ರಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಕ್ಕೆ ಪರ್ವಿಂದರ್ ಅವಾನಾ ಆಯ್ಕೆಯಾಗಿದ್ದರು. ತದನಂತರ 2016ರಲ್ಲಿ ಇವರು ಇಂಡಿಯನ್ ಪ್ರೀಮಿಯರ್ ಲೀಗ್ನ್‍ಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಟವಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin