ಗುರಿ ತಪ್ಪಿದ ಬಾಂಬ್’ಗೆ ಬಲಿಯಾದರು 16 ಪೊಲೀಸ್ ಅಧಿಕಾರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Bomb--01

ಕಾಬೂಲ್, ಜು.22-ಅಮೆರಿಕ ಯುದ್ಧ ವಿಮಾನವೊಂದು ನಡೆಸಿದ ದೋಷಪೂರಿತ ಬಾಂಬ್ ದಾಳಿಗೆ ಆಫ್ಘನ್ ರಾಷ್ಟ್ರೀಯ ಪೊಲೀಸ್ ಪಡೆಯ 126 ಅಧಿಕಾರಿಗಳು ಮೃತಪಟ್ಟು, ಕೆಲವರು ಗಾಯಗೊಂಡಿರುವ ಘಟನೆ ಆಫ್ಘಾನಿಸ್ತಾನದ ಗೆರೆಶ್ಕ್ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಪ್ರಮಾದವನ್ನು ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್ ಖಚಿತಪಡಿಸಿದೆ. ಈ ದಾಳಿ ನಂತರ ಸ್ಥಳ ಪರಿಶೀಲನೆ ನಡೆಸಿದಾಗ 16 ಅಧಿಕಾರಿಗಳು ಮೃತಪಟ್ಟು, ಇಬ್ಬರು ಯೋಧರು ಗಾಯಗೊಂಡಿರುವುದು ಕಂಡುಬಂದಿತು ಎಂದು ಹೆಲ್ಮಂಡ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಅಬ್ದುಲ್ ಗಫರ್ ಸಫಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧ ಅಮೆರಿಕ ಬೆಂಬಲಿತ ಕಾರ್ಯಾಚರಣೆ ವೇಳೆ ಜೆಟ್ ವಿಮಾನವು ಭದ್ರತಾ ಪಡೆಯ ಕಾಂಪೌಂಡ್ ಮೇಲೆ ನಡೆಸಿದ ದಾಳಿಯಿಂದಾಗಿ ಈ ಪ್ರಮಾದ ಜರುಗಿದೆ ಎಂದು ತಿಳಿಸಿರುವ ಅಮೆರಿಕ, ಹತ್ಯೆಯಾದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin