ನೂತನ ರಾಷ್ಟ್ರಪತಿ ಕಾರ್ಯದರ್ಶಿಯಾಗಿ ಸಂಜಯ್ ಕೊಠಾರಿ ನೇಮಕ

Kovind

ನವದೆಹಲಿ, ಜು.22-ರಾಷ್ಟ್ರಪತಿಯಾಗಿ ಚುನಾಯಿತರಾಗಿರುವ ರಾಮನಾಥ್ ಕೋವಿಂದ್ ಅವರ ಕಾರ್ಯದರ್ಶಿಯಾಗಿ ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ ಅಧ್ಯಕ್ಷ ಸಂಜಯ್ ಕೊಠಾರಿ ಅವರನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತ ಅಶೋಕ್ ಮಲ್ಲಿಕ್ ಅವರನ್ನು ಕೋವಿಂದ್ ಅವರ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಇಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಗುಜರಾತ್ ಕೇಡರ್‍ನ ಹಿರಿಯ ಅರಣ್ಯ ಸೇವೆ ಅಧಿಕಾರಿ ಭರತ್ ಲಾಲ್ ಅವರು ನೂತನ ರಾಷ್ಟ್ರಪತಿಗೆ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಎರಡು ವರ್ಷಗಳ ಆರಂಭಿಕ ಅವಧಿಗೆ ಈ ನೇಮಕಾತಿಗಳಿಗೆ ಅಂಗೀಕಾರ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin