ನೇರ ಚರ್ಚೆ ಮೂಲಕ ಉದ್ವಿಗ್ನತೆಯನ್ನು ಉಪಶಮನಗೊಳಿಸಿ : ಭಾರತ-ಚೀನಾಗೆ ಪೆಂಟಗನ್ ಮನವಿ

India-and-China--01

ವಾಷಿಂಗ್ಟನ್, ಜು.22-ಈಶಾನ್ಯ ರಾಜ್ಯ ಸಿಕ್ಕಿಂ ಡೋಕ್ಲಾಮ್‍ನಲ್ಲಿ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ನೇರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಎರಡೂ ದೇಶಗಳಿಗೂ ಅಮೆರಿಕದ ರಕ್ಷಣಾ ಇಲಾಖೆ-ಪೆಂಟಗನ್ ಮನವಿ ಮಾಡಿದೆ. ಈ ವಿಷಯದಲ್ಲಿ ನೇರ ಸಮಾಲೋಚನೆ ಮುಖೇನ ಉದ್ವಿಗ್ನತೆಯನ್ನು ಉಪಶಮನಗೊಳಿಸುವಂತೆ ಹಾಗೂ ಯಾವುದೇ ಬಲವಂತದ ಅಂಶಗಳಿಂದ ಮುಕ್ತವಾಗುವಂತೆ ನಾವು ಭಾರತ ಮತ್ತು ಚೀನಾಗೆ ಉತ್ತೇಜನ ನೀಡುತ್ತೇವೆ ಎಂದು ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್ ಹೇಳಿದ್ದಾರೆ. ಕಳೆದ ಒಂದು ವಾರದಿಂದಲೂ ಅಮೆರಿಕದ ವಿದೇಶಾಂಗ ಇಲಾಖೆಯು ಇದೇ ರೀತಿಯ ಹೇಳಿಕೆಗಳ ಮೂಲಕ ಉಭಯ ದೇಶಗಳಿಗೆ ಮನವಿ ಮಾಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin