ನ್ಯಾಷನಲ್ ಹೆರಾಲ್ಡ್ ಹಗರಣ : ಕೋರ್ಟ್‍ಗೆ ಸೋನಿಯಾಗಾಂಧಿ ಉತ್ತರ

Soniya

ನವದೆಹಲಿ, ಜು. 22 – ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೆಲ ದಾಖಲಾತಿಗಳನ್ನು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‍ಗಾಂಧಿ ಇಂದು ತಮ್ಮ ಪ್ರತ್ಯುತ್ತರಗಳನ್ನು ಕೋರ್ಟ್‍ಗೆ ಸಲ್ಲಿಸಿದರು. ಕಳೆದ ಜು.1ರಂದು ದೆಹಲಿ ನ್ಯಾಯಾಲಯ ಡಾ.ಸ್ವಾಮಿ ಅವರ ಅರ್ಜಿಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸೋನಿಯಾ ಮತ್ತು ರಾಹುಲ್ ಅವರಿಗೆ ಸೂಚಿಸಿತ್ತು. ಅದರಂತೆ ಈ ಇಬ್ಬರೂ ಇಂದು ತಮ್ಮ ಪ್ರತ್ಯುತ್ತರಗಳನ್ನು ಕೋರ್ಟ್‍ಗೆ ಸಲ್ಲಿಸಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಲೀಕತ್ವ ಹೊಂದಿರುವ ಅಸೋಸಿಯೇಟ್ ಜನರಲ್ ಲಿಮಿಟೆಡ್ (ಎಜೆಎಲ್)ನಿಂದ ಡಾ.ಸ್ವಾಮಿ ಅವರು ಕಂಪೆನಿ ಆಫ್ ರಿಜಿಸ್ಟ್ರಾರ್‍ಗೆ ಸಲ್ಲಿಸಿರುವ ಲೆಡ್ಜರ್ ಮತ್ತು ಬ್ಯಾಂಕ್ ವಿವರಗಳನ್ನು ನೀಡುವಂತೆ ಹೊಸ ಅರ್ಜಿ ಸಲ್ಲಿಸಿದ್ದು, ಜತೆಗೆ ಸಾಲವನ್ನು ಷೇರು ಬಂಡವಾಳವಾಗಿ ಪರಿವರ್ತಿಸುವ ಸಭೆಯ ವಿವರಗಳು, ಸಾಲ ತೆಗೆದುಕೊಂಡ ವರ್ಷದ ಬ್ಯಾಲೆನ್ಸ್ ಶೀಟ್, ಲಾಭ-ನಷ್ಟ ಮತ್ತು ಲೆಕ್ಕ ಪರಿಶೋಧನಾ ವರದಿಗಳ ದಾಖಲಾತಿಗಳನ್ನು ಕೋರಿದ್ದರು. ಈ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಜು.22ಕ್ಕೆ ಮುಂದೂಡಿತ್ತು. ಅದರಂತೆ ಇಂದು ಸೋನಿಯಾ ಹಾಗೂ ರಾಹುಲ್ ನ್ಯಾಯಾಲಯಕ್ಕೆ ತಮ್ಮ ಉತ್ತರದ ಅರ್ಜಿಗಳನ್ನು ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin