ಬ್ಯಾಂಕ್‍ಗೆ ನುಗ್ಗಿ 9 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Robbery--01

ಜೈಪುರ, ಜು.22-ಬ್ಯಾಂಕ್ ಒಂದಕ್ಕೆ ನುಗ್ಗಿದ ಡಕಾಯಿತ ತಂಡವೊಂದು 9 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿಯಾಗಿರುವ ಸಿನಿಮೀಯ ಘಟನೆ ರಾಜಸ್ತಾನದ ಜೈಪುರದಲ್ಲಿ ನಿನ್ನೆ ಹಾಡಹಗಲೇ ನಡೆದಿದೆ. ಜೈಪುರ್ ರಜತ್‍ಪಥ್‍ನಲ್ಲಿರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಶಾಖಾ ಕಚೇರಿಗೆ ನಿನ್ನೆ ಮಧ್ಯಾಹ್ನ ಭೋಜನದ ಅವಧಿಯಲ್ಲಿ ನುಗ್ಗಿದ ನಾಲ್ವರು ಶಸ್ತ್ರಸಜ್ಜಿತ ಡಕಾಯಿತರು ಭದ್ರತಾ ಗಾರ್ಡ್‍ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸಿಬ್ಬಂದಿಯನ್ನು ಬೆದರಿಸಿ ಲಾಕರ್‍ನಲ್ಲಿದ್ದ 30 ಕಿಲೋ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾದರು.

ಜನಸಂದಣಿ ಇರುವ ಮಾರ್ಗದಲ್ಲಿ ಕೆಲವೇ ನಿಮಿಷಗಳಲ್ಲಿ ಈ ಭಾರೀ ಡಕಾಯಿತಿ ನಡೆದಿದೆ. ಡಕಾಯಿತಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ಯಾಂಕಿನ ವ್ಯವಹಾರ ಮತ್ತು ಚಟುವಟಿಕೆಗಳ ಮೇಲೆ ಕೆಲಕಾಲದಿಂದ ನಿಗಾ ವಹಿಸಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಕಾಯಿತರ ಸೆರೆ ವ್ಯಾಪಕ ಬಲೆ ಬೀಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin