ಯಾತ್ರಿಗಳ ಬಸ್ ಉರುಳಿ ಬಿದ್ದು 9 ಮಂದಿ ದುರ್ಮರಣ

Bus-Accident

ಜೈಪುರ, ಜು.22-ಯಾತ್ರಿಗಳಿದ್ದ ಬಸ್ ಉರುಳಿ ಬಿದ್ದು ಆರು ಮಹಿಳೆಯರೂ ಸೇರಿದಂತೆ 9 ಮಂದಿ ಮೃತಪಟ್ಟು, 22 ಜನ ಗಾಯಗೊಂಡಿರುವ ಘಟನೆ ರಾಜಸ್ಥಾನದ ಉದಯಪುರ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತರು ಮತ್ತು ಗಾಯಾಳುಗಳು ಗುಜರಾತಿನ ಯಾತ್ರಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಸರೋವರ ನಗರಿ ಉದಯ್‍ಪರ್‍ನಿಂದ 10 ಕಿ.ಮೀ. ದೂರದಲ್ಲಿರುವ ನೆಹ್ಲಾ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ವಾಹನ ನಿಯಂತ್ರಣ ತಪ್ಪಿ ಉರುಳಿ ಬಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಅಹಮದಾಬಾದ್‍ನಿಂದ ಪುಷ್ಕರ್ ಮತ್ತು ಹರಿದ್ವಾರ ಸೇರಿದಂತೆ ಧಾರ್ಮಿಕ ಸ್ಥಳಗಳ ಭೇಟಿಗಾಗಿ 16 ದಿನಗಳ ಪ್ರವಾಸ ಆರಂಭಿಸಿದ್ದ ಈ ಬಸ್ಸಿನಲ್ಲಿ ಗುಜರಾತ್ ಯಾತ್ರಿಕರು ಇದ್ದರು ಎಂದು ಎಸ್ಪಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin