ರಸ್ತೆ ಕೆಳಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

Congress-01
ಬೆಂಗಳೂರು, ಜು.22-ನಗರದ ಮಾಗಡಿ ರಸ್ತೆ ಕೆಳಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಮಾಗಡಿ ರಸ್ತೆ ಕೆಳಸೇತುವೆ ಉದ್ಘಾಟನಾ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್‍ನ ರಾಜಕೀಯ ಬಹಿರಂಗವಾಗಿದ್ದು , ಅಂಡರ್‍ಪಾಸ್‍ಗೆ ನಾಡಪ್ರಭು ಕೆಂಪೇಗೌಡ ಎಂದು ಸ್ವಯಂ ಘೋಷಣೆ ಮಾಡಿ ಬಿಜೆಪಿ ಹೆಸರಿಟ್ಟಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಿಷ್ಟಾಚಾರ ಉಲ್ಲಂಘನೆಗೆ ಆಕ್ರೋಶ ವ್ಯಕ್ತಪಡಿಸಿದೆ.
ಗೋವಿಂದರಾಜ್‍ನಗರ ವಾರ್ಡ್ ಕಾರ್ಪೊರೇಟರ್ ಉಮೇಶ್ ಶೆಟ್ಟಿ , ಶಾಸಕ ಪ್ರಿಯಾಕೃಷ್ಣ ಬೆಂಬಲಿಗರ ನಡುವೆ ಮಾತಿನ ಚಕಮಕಿಗೆ ಉದ್ಘಾಟನಾ ಕಾರ್ಯಕ್ರಮ ವೇದಿಕೆಯಾಗಿದ್ದು ವಿಪರ್ಯಾಸವಾಗಿತ್ತು.

ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಅವರಿಗೆ ವೇದಿಕೆ ಮೇಲೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರಲ್ಲದೆ ಉಮೇಶ್ ಶೆಟ್ಟಿ ಅವರನ್ನು ಸಭೆಯಿಂದ ಹೊರಕಳುಹಿಸುವಂತೆ ಆಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ವೇದಿಕೆ ಮುಂಭಾಗದಲ್ಲಿಯೇ ಉಮೇಶ್ ಶೆಟ್ಟಿ ನಿಂತಿದ್ದರು. ಜಟಾಪಟಿ ನಡೆಸುತ್ತಿದ್ದ ಎಲ್ಲ ಕಾರ್ಯಕರ್ತರನ್ನು ಪೊಲೀಸರು ಹೊರಗೆ ಕಳುಹಿಸಲು ಮುಂದಾದಾಗ ತಳ್ಳಾಟ-ನೂಕಾಟ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾ ಎಂ.ಕೃಷ್ಣಪ್ಪ , ಕೆ.ಜೆ.ಜಾರ್ಜ್, ಶಾಸಕರಾದ ಪ್ರಿಯಾಕೃಷ್ಣ, ಎಚ್.ಎಂ.ರೇವಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಉಮೇಶ್ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿ ಇಬ್ಬರೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಾಗ ಮಧ್ಯಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಸಮಾಧಾನಗೊಳಿಸಿದರಲ್ಲದೆ ಉಮೇಶ್ ಶೆಟ್ಟಿ ಅವರಿಗೆ ಮಾತ್ರ ವೇದಿಕೆಗೆ ಬರಲು ಅವಕಾಶ ಕಲ್ಪಿಸಿದರು.  ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಘೋಷಣೆ, ಶಿಳ್ಳೆ ಮುಂತಾದವು ಮೊಳಗಿದವು. ಸಚಿವ ಎಂ.ಕೃಷ್ಣಪ್ಪ ಅವರು ಕಾರ್ಯಕ್ರಮದಲ್ಲಿ ಘೋಷಣೆಗಳು ಕೂಗದಂತೆ ಸೂಚನೆ ನೀಡಿದರಲ್ಲದೆ ಗಲಾಟೆ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin