ಆಫ್ಘಾನಿಸ್ತಾನದಲ್ಲಿ ಸೇನೆ ಕಾರ್ಯಾಚರಣೆ 56 ಉಗ್ರರು ಫಿನಿಷ್

Afganistan--01

ಕಾಬೂಲ್, ಜು.23-ಆಫ್ಘಾನಿಸ್ತಾನದಾದ್ಯಂತ ಭದ್ರತಾ ಪಡೆಗಳು ನಡೆಸಿರುವ ಬಿರುಸಿನ ಕಾರ್ಯಾಚರಣೆಯಲ್ಲಿ 56 ಉಗ್ರರು ಹತರಾಗಿ, ಇತರೆ 30 ಬಂಡುಕೋರರು ತೀವ್ರ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ವೈರಿಗಳಿಂದ ಕೆಲವು ಪ್ರದೇಶಗಳನ್ನು ಮುಕ್ತಗೊಳಿಸಲು ಕಳೆದ 48 ಗಂಟೆಗಳ ಅವಧಿಯಲ್ಲಿ ಅಫ್ಘನ್ ನ್ಯಾಷನಲ್ ಸೆಕ್ಯೂರಿಟಿ ಮತ್ತು ರಕ್ಷಣಾ ಪಡೆಗಳು ಹಲವಾರು ತೆರವು ಕಾರ್ಯಚರಣೆಗಳನ್ನು ಕೈಗೊಂಡವು. ಈ ಸೇನಾ ಉಪಕ್ರಮದಲ್ಲಿ 56 ಶಸ್ತ್ರಸಜ್ಜಿತ ಉಗ್ರರು ಹತರಾದರು ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನಂಗಹಾರ್, ಘಜ್ನಿ, ಲಾಗೋರ್, ಕಂದಹಾರ್, ಹೆಲ್ಮಂಡ್, ಕುಂದುಜ್ ಮೊದಲಾದ ಪ್ರಾಂತ್ಯಗಳಲ್ಲಿ ತಾಲಿಬಾನ್ ಮತ್ತು ಐಎಸ್ ಬೆಂಬಲಿತ ಉಗ್ರರ ಉಪಟಳ ಹೆಚ್ಚಾಗಿತ್ತು. ಈಗ ಆ ಪ್ರದೇಶಗಳಲ್ಲಿ ಬಂಡುಕೋರರ ಪ್ರಾಬಲ್ಯವನ್ನು ಮಟ್ಟ ಹಾಕಲಾಗಿದೆ. ಹತರಾದ ಮತ್ತು ಗಾಯಗೊಂಡ 30ಕ್ಕೂ ಹೆಚ್ಚು ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin