ಕಳ್ಳರ ಕಾಟ : ಟೊಮೆಟೊಗೆ ಫುಲ್ ಸೆಕ್ಯೂರಿಟಿ..!

Tomato--01

ಇಂದೋರ್,ಜು.23- ಸದ್ಯ ಟೊಮೆಟೊ ಬೆಲೆ ಗಗನಕ್ಕೇರಿದ್ದು ಮಾರ್ಕೆಟ್‍ನಲ್ಲಿ ಒಂದು ಕೆಜಿ ಟೊಮೊಟೊ ಬೆಲೆ ನೂರು ರೂ. ಗಡಿ ದಾಟಿದೆ. ಕಳ್ಳಕಾಕರ ಕಣ್ಣು ಟೊಮೆಟೊ ಮೇಲೆ ಬಿದ್ದಿದ್ದು ಮಧ್ಯಪ್ರದೇಶದಲ್ಲಿ ಕಳ್ಳತನದ ಆತಂಕದಿಂದ ಟೊಮೆಟೊಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಹೌದು, ಇದೇ ಜುಲೈ 20ರಂದು ಮುಂಬೈನ ದಾಹಿಸರ್ ಮಾರ್ಕೆಟ್‍ನಲ್ಲಿ 900 ಕೆ.ಜಿ ಟೊಮೆಟೊಗಳನ್ನು ಕಳ್ಳರು ಕದ್ದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಮಧ್ಯಪ್ರದೇಶದ ಇಂದೋರ್ನ್‍ಲ್ಲಿ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳು ಟೊಮೆಟೊಗೆ ಬಂದೂಕುಧಾರಿಯ ಭದ್ರತೆ ನೀಡಿದ್ದಾರೆ. ಮಾರ್ಕೆಟ್‍ಗೆ ಟೊಮೆಟೊ ಟ್ರಕ್‍ಗಳು ಬರುತ್ತಿದಂತೆ ಭದ್ರತಾ ಸಿಬ್ಬಂದಿ, ಟೊಮೆಟೊಗಳಿಗೆ ಗನ್ ಹಿಡಿದುಕೊಂಡು ಭದ್ರತೆ ನೀಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin