ಕಾನೂನು ವಿವಿ ಕ್ಯಾಂಪಸ್‍ನಲ್ಲೇ ರ‍್ಯಾಗಿಂಗ್, ಅಶ್ಲೀಲ ಚಿತ್ರ ವೀಕ್ಷಣೆ, ಸೆಕ್ಸ್ , ಬಲತ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Sex--01

ಭೋಪಾಲ್, ಜು.23-ಕಾನೂನು ರಕ್ಷಣೆ ಮಾಡಿ ನೊಂದವರಿಗೆ ನ್ಯಾಯ ಒದಗಿಸಲು ಹೋರಾಡಬೇಕಾಗಿದ್ದ ಬಾವಿ ವಕೀಲರೇ ಅತ್ಯಂತ ಹೀನ ರ‍್ಯಾಗಿಂಗ್ ಕೃತ್ಯಗಳಲ್ಲಿ ತೊಡಗಿರುವ ಆಘಾತಕಾರಿ ಪ್ರಕರಣಗಳು ಭೋಪಾಲ್‍ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆದಿದೆ. ಚಿತ್ರಹಿಂಸೆ, ಅಶ್ಲೀಲ ದೃಶ್ಯಗಳನ್ನು ನೋಡುವಂತೆ ಒತ್ತಾಯಿಸಿರುವ ಹಾಗೂ ಲೈಂಗಿಕ ಚಟುವಟಿಕೆಗಳಿಗೆ ಬಲವಂತ ಮಾಡಿರುವ ಪ್ರಕರಣಗಳು ವರದಿಯಾಗಿದ್ದು ಸರ್ಕಾರವನ್ನೇ ಚಿಂತೆಗೀಡು ಮಾಡುವಂತಾಗಿದೆ.

ಮೂವರು ದುಷ್ಟ ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ದೌರ್ಜನ್ಯಕ್ಕೆ ಒಳಗಾದ ಕಿರಿಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ರ‍್ಯಾಗಿಂಗ್ ತಡೆ ಘಟಕಕ್ಕೆ ದೂರು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಮೂವರಲ್ಲಿ ವಿದ್ಯಾರ್ಥಿನಿಯೊಬ್ಬಳೂ ಇದ್ದಾಳೆ.  ಆಕೆ ಪದೇ ಪದೇ ಲೈಂಗಿಕ ಚೇಷ್ಟೆ ನಡೆಸಿದ್ದಾಳೆ. ಪಾನಮತ್ತಳಾಗಿ ಬಂದು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾಳೆ. ನಾನು ಆಕೆಯಿಂದ ತಪ್ಪಿಸಿಕೊಂಡಿದ್ದೇನೆ. ಅದರೆ ಈ ಕ್ಯಾಂಪಸ್ ಸುರಕ್ಷಿತವಾಗಿದೆ ಎಂಬ ಭರವಸೆ ನನಗಿಲ್ಲ ಎಂದು ಕಿರಿಯ ವಿದ್ಯಾರ್ಥಿಯೊಬ್ಬ ದೂರಿನಲ್ಲಿ ತಿಳಿಸಿದ್ದಾನೆ.  ದೂರನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ ಎಂದು ಸಿಎಲ್‍ಐಯು ನಿರ್ದೇಶಕ ಪ್ರೊ.ಎಸ್.ಎಸ್.ಸಿಂಗ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin