ಚಾಮುಂಡಿ ಹುಂಡಿಗೆ ಹರಿದು ಬಂತು 1.03 ಕೋಟಿ ರೂ.ಆದಾಯ

Chamundeshwari-01

ಮೈಸೂರು, ಜು.23-ಈ ಬಾರಿಯ ಆಷಾಢ ಮಾಸದ ವಿಶೇಷ ಪೂಜೆಯಿಂದ ಚಾಮುಂಡಿ ದೇವಾಲಯಕ್ಕೆ 1.03 ಕೋಟಿ ರೂ. ಆದಾಯ ಬಂದಿದೆ. ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ನಾಲ್ಕು ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ವೇಳೆ ವಿಶೇಷ ಪೂಜಾ ಟಿಕೆಟ್ ಪಡೆದು ದೇವಿಯ ದರ್ಶನ ಪಡೆದ ಭಕ್ತರಿಂದ ದೇವಾಲಯಕ್ಕೆ 1,03,83,030 ಕೋಟಿ ರೂ. ಸಂಗ್ರಹವಾಗಿದೆ.  ಈ ಬಾರಿ ಧರ್ಮದರ್ಶನದೊಂದಿಗೆ 50 ರೂ., 100 ರೂ., 300ರೂ.ಟಿಕೆಟ್ ನ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ಶುಕ್ರವಾರದಂದು 18,21,370 ರೂ., 2ನೆ ಶುಕ್ರವಾರ 22,70,410, 3ನೆ ಶುಕ್ರವಾರ 23,78,250ರೂ., ವರ್ಧಂತಿಯಂದು 15,36,340ರೂ ಹಾಗೂ ಕೊನೆಯ ಶುಕ್ರವಾರದಂದು 23,76,660ರೂ. ಸಂಗ್ರಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin