ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವ ಕಾತರದಲ್ಲಿ ಭಾರತದ ಮಹಿಳಾ ಮಣಿಗಳು

Cricket

ಲಂಡನ್ ಜು.23 : ಭಾರತ ಕ್ರಿಕೆಟ್ ಅಭಿಮಾನಿಗಳ ಕಣ್ಣು ಇಂಗ್ಲೆಂಡ್ ಮೇಲಿದೆ. ಭಾನುವಾರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮೊದಲ ಬಾರಿ ವಿಶ್ವ ಕಪ್ ಎತ್ತಿ ದಾಖಲೆ ಬರೆಯುವ ವಿಶ್ವಾಸದಲ್ಲಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಹಿಳಾ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಭಾರತದ ಇನ್ನೂ ಅನೇಕ ಆಟಗಾರರು ಶುಭಾಶಯ ಕೋರಿದ್ದಾರೆ. (ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆ -ಭಾರತೀಯ ಕಾಲಮಾನ)

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದೆ. ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿರುವ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆಯಾದೆಯಾದರೂ, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿರುವ ಇಂಗ್ಲೆಂಡ್ ವನಿತೆಯರ ತಂಡ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ಇಂದಿನ ಫೈನಲ್ ಪಂದ್ಯ ಎಲ್ಲರ ಗಮನ ಸೆಳೆದಿದೆ.

ಒಂದು ವೇಳೆ ಮಿಥಾಲಿ ಪಡೆ ಗೆದ್ದರೆ ಇದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯಾಗಲಿದ್ದು, ಇನ್ನೊಂದೆಡೆ ತಲಾ ಮೂರು ಬಾರಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್ ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ತಂಡಗಳು :

ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್, ಪೂನಮ್ ರಾವತ್, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಷ್ಠ್, ಸುಶ್ಮಾ ವರ್ಮಾ, ಮಾನಸಿ ಜೋಶಿ, ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್, ನುಶತ್ ಪರ್ವೀನ್, ಸ್ಮೃತಿ ಮಂದಾನ.

ಇಂಗ್ಲೆಂಡ್:

ಹೀದರ್ ನೈಟ್ (ನಾಯಕಿ), ಟಾಮಿ ಬ್ಯೂಮೌಂಟ್, ಕ್ಯಾಥರಿನ್ ಬ್ರೂಂಟ್, ಜಾರ್ಜಿಯ ಎಲ್ವಿಸ್, ಜೆನಿ ಗೂನ್, ಅಲೆಕ್ಸ್ ಹಾರ್ಟ್ಲಿ, ಡ್ಯಾನಿಯೆಲ್ ಹಜೆಲ್, ಬೇತ್ ಲ್ಯಾಂಗ್ಸ್ಟನ್, ಲಾರಾ ಮಾರ್ಷ್, ಅನ್ಯಾ ಶ್ರುಬ್ಸೋಲೆ, ನಥಾಲಿ ಶಿವರ್, ಸಾರಾ ಟೇಲರ್, ಫ್ರಾನ್ ವಿಲ್ಸನ್, ಡ್ಯಾನಿಯೆಲ್ ವಿಟ್, ಲಾರೆನ್ ವಿನ್ಫೀಲ್ಡ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin