ನಂದಿಹಳ್ಳಿಯಲ್ಲಿ ಕಳ್ಳತನ ಮಾಡಿದ್ದ 4 ಜನ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

ತುಮಕೂರು. ಜು.23 : ತುಮಕೂರು ಸಮೀಪದ ನಂದಿಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿಕೊಂಡು ತಲೆಮರೆಸಿಕೊಂಡಿದ್ದ 4 ಜನ ಕಳ್ಳರನ್ನು ಬಂಧಿಸಿರುವ ಹುಳಿಯಾರು ಪೊಲೀಸರು ಅವರಿಂದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಳೆದ ವರ್ಷ ಡಿಸಂಬರ್ ನಲ್ಲಿ ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದ ಬಸವರಾಜು ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮೇಲ್ಚಾವಣೆಯ ಹೆಂಚು ತೆಗೆದು ಒಳನುಗಿದ್ದ ಕಳ್ಳರು 2.80.000 ರೂ ಹಣ ಹಾಗೂ ಚಿನ್ನದ ಆಭರರಣವನ್ನು ಕದ್ದು ನಾಪತ್ತೆಯಾಗಿದ್ದರು.

ಈ ಬಗ್ಗೆ ಪ್ರಕರಣದ ಹುಳಿಯಾರು ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವದಾಖಲಾಗಿತ್ತು ಇದರ ಬೆನ್ನುಹತ್ತಿದ ಹುಳಿಯಾರು ಪೊಲೀಸರು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ವೇಣುಗೋಪಾಲ್ ರವರ ನೇತೃತ್ವದಲ್ಲಿ ಸಿಪಿಐ ಮಾರಪ್ಪ ಹಾಗೂ ಪಿ.ಎಸ್.ಐ. ವೈ.ವಿ.ರವೀಂದ್ರ ಮತ್ತು ಸಿಬ್ಬಂದಿಗಳ ತಂಡ ಕಾರ್ಯಚಾರಣೆಯನ್ನ ನಡೆಸಿ. ಕಳ್ಳತನಕ್ಕೆ ಸಂಬಂಧಿಸಿದಂತೆ 4 ಜನರನ್ನು ಶುಕ್ರವಾರ ಬಂಧಿಸಿದ್ದಾರೆ. ಈ ಸಂಬಂಧ ಆರೋಪಿಗಳಾದ ನಂದಿಹಳ್ಳಿ ನಿವಾಸಿಗಳಾದ ಗವಿರಂಗಯ್ಯ, ನಾಗರಾಜು, ಮಂಜುನಾಥ್, ಹರೀಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ ಪೋಲಿಸರು ಅವರ ಬಳಿಯಿದ್ದ 70 ಸಾವಿರ ನಗದು ಹಾಗೂ 38 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡು,ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin